ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಅವಿನಹಳ್ಳಿ ಹೋಬಳಿಯ ಗಿಣಿವಾರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದೇಶಿ ಪ್ರವಾಸಿಗರು ಭರ್ಜರಿ ಸ್ಟೆಪ್ ಹಾಕಿ, ಕುಣಿದು ಕುಪ್ಪಳಿಸಿದ್ದಾರೆ. ಸಾಗರಕ್ಕೆ ಪ್ರವಾಸ ಬಂದಿದ್ದ ವಿದೇಶಿ ಪ್ರವಾಸಿಗರು ಇಲ್ಲಿನ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಸ್ಥಳೀಯರ ಜೊತೆ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಮೆರವಣಿಗೆ ಗಿಣಿವಾರ ಗ್ರಾಮದಿಂದ ಸಾಗರ ಸಿಗಂದೂರು ರಸ್ತೆಗೆ ಬರುತ್ತಿದ್ದಂತೆ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರೂ ಭಾಗವಹಿಸಿದರು. ಈ ವೇಳೆ ಅವರು ಸ್ಥಳೀಯರ ಜೊತೆ ಹೆಜ್ಜೆ ಹಾಕಿ ಕುಣಿದು, ಎಲ್ಲರ ಗಮನ ಸೆಳೆದರು.