ಅಳದಂಗಡಿ: ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೌರವ ಸಲಹೆಗಾರರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ, ಕಾರ್ಯಾಧ್ಯಕ್ಷರಾಗಿ ನಿತ್ಯಾನಂದ ಎನ್. ನಾವರ ಯೋಗಕ್ಷೇಮ, ಪ್ರಧಾನ ಕಾರ್ಯದರ್ಶಿಯಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಯುವ ಮುಂದಾಳು ಸಂತೋಷ್ ಕುಮಾರ್ ಕಾಪಿನಡ್ಕ ಹಾಗೂ ಕೋಶಾಧಿಕಾರಿಯಾಗಿ ಸೋಮನಾಥ್ ರಾಜಪಾದೆ ಆಯ್ಕೆಯಾದರು. ಸಮಿತಿ ಉಪಾಧ್ಯಕ್ಷರಾಗಿ ನಿತ್ಯಾನಂದ ಶೆಟ್ಟಿ ನೊಚ್ಚ, ರಾಕೇಶ್ ಹೆಗ್ಡೆ ಬಳಂಜ, ನವೀನ್ ಕೆ. ಸಾಮಾನಿ ಕರಂಬಾರು, ಸದಾನಂದ ಪೂಜಾರಿ ಉಂಗಿಲಬೈಲು, ಸುರೇಶ್ ಶೆಟ್ಟಿ ಕುರೆಲ್ಯ ನಾಲ್ಕೂರು, ಹೇಮಂತ್ ತೆಂಕಕಾರಂದೂರು, ಸುಂದರ ಶೆಟ್ಟಿ ಸುಕ್ಕೇರಿ, ಉಮೇಶ್ ದುಗ್ಗಲಚ್ಚಿಲ್ ಪಿಲ್ಯ, ಆನಂದ ಸಾಲಿಯಾನ್ ಓಡಿಮಾರು, ಶುಭಕರ ಪೂಜಾರಿ ಕುದ್ಯಾಡಿ, ವೀರೇಂದ್ರ ಕುಮಾರ್ ರಾಜಪಾದ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಹಿಮರಡ್ಡ ನಾವರ ಆಯ್ಕೆಯಾಗಿದ್ದಾರೆ. ದೇಗುಲದ ಬ್ರಹ್ಮಕಲಶೋತ್ಸವ ಮಾ.31ರಿಂದ ಎ. 4ರವರೆಗೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.