Tuesday, April 22, 2025
Homeಕಾರ್ಕಳಕಾಂಗ್ರೆಸ್ನ ಕುಟುಂಬೋತ್ಸವದಲ್ಲಿ ಮಾಜಿ ಶಾಸಕ ದಿ.ಗೋಪಾಲ್ ಭಂಡಾರಿ ಅವರಿಗೆ ಅವಮಾನ- ಸುರೇಶ್ ಶೆಟ್ಟಿ ಶಿವಪುರ

ಕಾಂಗ್ರೆಸ್ನ ಕುಟುಂಬೋತ್ಸವದಲ್ಲಿ ಮಾಜಿ ಶಾಸಕ ದಿ.ಗೋಪಾಲ್ ಭಂಡಾರಿ ಅವರಿಗೆ ಅವಮಾನ- ಸುರೇಶ್ ಶೆಟ್ಟಿ ಶಿವಪುರ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೊನ್ನೆ ನಡೆದ ಕುಟುಂಬೋತ್ಸವ ಸಮಾವೇಶದ ವೇದಿಕೆಯಲ್ಲಿ ಹಾಗೂ ಕಾರ್ಯಕ್ರಮ ಪೂರ್ವದಲ್ಲಿ ಪ್ರಚಾರ ಫಲಕಗಳಲ್ಲಿ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ದಿ.ಗೋಪಾಲ್ ಭಂಡಾರಿ ಯವರ ಫೋಟೋ ಹಾಕದೆ ಕಾರ್ಕಳ ಕಾಂಗ್ರೆಸ್ ಭಂಡಾರಿ ಅವರಿಗೆ ಅವಮಾನ ಮಾಡಿದೆ.

ಒಂದು ಸಂದರ್ಭದಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಗೋಪಾಲ್ ಭಂಡಾರಿ ಅವರಿಗೆ ಜೀವಂತ ಇರುವಾಗಲೇ ಅವಮಾನಿಸಿದ ಮುನಿಯಾಲು ಉದಯಕುಮಾರ್ ಶೆಟ್ಟಿ ಮತ್ತು ಅವರ ತಂಡ  ಮಾನ್ಯ ಭಂಡಾರಿಯವರು ಗತಿಸಿದ ನಂತರವು ಅವಮಾನ ಮಾಡುತ್ತಿದೆ. ಇಂತಹ ನಡವಳಿಕೆ ಕಾರ್ಕಳ ಕಾಂಗ್ರೆಸ್ ನಾಯಕರ ಮನೋ ಸ್ಥಿತಿಯನ್ನು ತೋರಿಸುತ್ತಿದೆ. ದಿ.ಗೋಪಾಲ್ ಭಂಡಾರಿ ಯವರು ತನ್ನ ಕಾಲಾವಧಿ ಯಲ್ಲಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಪಕ್ಷ ಕಟ್ಟಿದ್ದಾರೆ ಆದರೆ ಈಗಿನ ನಾಯಕರುಗಳು ತಮ್ಮ ತಮ್ಮ ಹಿಂಬಾಲಕರಿಗೆ ಮಾತ್ರ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಏನೇ ಇರಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಹಿಂದುಳಿದ ವರ್ಗದ ನಾಯಕನಿಗೆ ಕಾಂಗ್ರೆಸ್ ಅವಮಾನ ಮಾಡಿರುವುದು ಬೇಸರದ ಸಂಗತಿ.

ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಂ ವೀರಪ್ಪ ಮೊಯ್ಲಿಯವರು ಡಿಕೆ ಶಿವಕುಮಾರ್ ರವರನ್ನು ಮುಂದಿನ ಮುಖ್ಯಮಂತ್ರಿ ಆಗುತ್ತೀರಿ ಎಂದಾಗ ವೇದಿಕೆಯಲ್ಲಿದ್ದ ಕಾರ್ಕಳ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಾನ್ಯ ಉದಯ್ ಕುಮಾರ್ ಶೆಟ್ಟಿ ಯವರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದು ನೋಡಿದರೆ ಇವರು ಸಿದ್ದರಾಮಯ್ಯನವರ ಬಣದಿಂದ ಈಗ ಡಿಕೆಶಿ ಬಣಕ್ಕೆ ವಾಲಿದರೆ..? ಎಂಬ ಅನುಮಾನ ಮೂಡುತ್ತಿದೆ. ಡಿ.ಕೆ.ಶಿ ಯವರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದಕ್ಕೆ ಕಾರ್ಕಳದಲ್ಲಿ ಇಂತಹ ಸಮಾವೇಶ ಹಮ್ಮಿಕೊಂಡರೆ ? ಎಂಬ ಸಂದೇಹವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.


RELATED ARTICLES
- Advertisment -
Google search engine

Most Popular