Saturday, February 15, 2025
Homeಧಾರ್ಮಿಕಪರಪು ಗುತ್ತುಕರೆ ದೈವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಪರಪು ಗುತ್ತುಕರೆ ದೈವಸ್ಥಾನ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

ಪರಪು ಗುತ್ತುಕರೆಯ ಪಿಲಿಚಂಡಿ, – ಬೊಬ್ಬರ್ಯ, ನೀಚ ಮತ್ತು ಗುಳಿಗ ದೈವ ಸ್ಥಾನದ ಜೀರ್ಣೋದ್ದಾರದ ನಿಮಿತ್ತ ಶಿಲಾನ್ಯಾಸ ಕಾರ್ಯಕ್ರಮ ಜರುಗಿತು.
ಶಾಸಕ ವಿ.ಸುನಿಲ್ ಶಿಲಾನ್ಯಾಸ ನೆರವೇರಿಸಿ, ಕುಮಾರ್ ನೂರಾರು ರಾ ವರ್ಷಗಳಿಂದ ಆರಾಧನೆ ಮಾಡಿಕೊಂಡು ಬರುತ್ತಿರುವ ಪರಪು ಗುತ್ತುಕರೆಯ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶಿಲಾನ್ಯಾಸ ನೆರವೇರಿದ್ದು, 20 ಲಕ್ಷ ರೂ. ವೆಚ್ಚದಲ್ಲಿ ನೂತನ ಶಿಲಾಮಯ ಗುಡಿ ನಿರ್ಮಾಣಗೊಳ್ಳುತ್ತಿದೆ ಎಂದರು.
ಮುನಿಯಾಲು ಉದಯ ಕೃಷ್ಣಯ್ಯ. ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಧಾರ್ಮಿಕ ನೆಲೆಗಟ್ಟಿನ ಈ ತುಳುನಾಡಿನಲ್ಲಿ ದೈವಸ್ಥಾನಗಳು ಬಹಳ ಪ್ರಾಮುಖ್ಯತೆ ಪಡೆದಿವೆ. ಗುತ್ತು ಕರೆಯ ಜೀರ್ಣೋದ್ದಾರ ಕಾರ್ಯ ಮುಂದಿನ ಪೀಳಿಗೆಗೆ ದೈವಸ್ಥಾನದ ಬೆಲೆ ಏನೆಂದು ತಿಳಿಸಿಕೊಡುತ್ತದೆ ಎಂದರು.
ಕಾರ್ಯಕ್ಮದಲ್ಲಿ ಕಾರ್ಕಳದ ಶ್ರೀನಿವಾಸ ಗ್ಲಾಸ್ ಮಾಲೀಕ ಗಣಪತಿ ಪೈ, ಗುರುದೇವ ಪ್ಲಾಸ್ಟಿಕ್ ಮಂಗಳೂರಿನ ಉದ್ಯಮಿ ರೋಶನ್ ಬಾಳಿಗ, ಮುಂಬಯಿ ಉದ್ಯಮಿ ಕರುಣಾ ಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ
ಕೆ.ವಸಂತ್ ರಾಜ್, ಕಾರ್ಯಾದರ್ಶಿ ರವೀಂದ್ರ ಶೆಟ್ಟಿ ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಶೆಟ್ಟಿ ಉಪಸ್ಥಿತರಿದ್ದರು.
ಪೂರ್ಣಿಮಾ ಗೋರೆ ಪ್ರಾರ್ಥಿಸಿದರು. ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್ ರಾವ್ ಸ್ವಾಗತಿಸಿದರು. ಮಹಿಳಾ-ಸಮಿತಿ ಕಾರ್ಯದರ್ಶಿ, ಜ್ಯೋತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ವಿನಯ್ ಶೆಟ್ಟಿ ವಂದಿಸಿದರು.

RELATED ARTICLES
- Advertisment -
Google search engine

Most Popular