ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಯಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ದೀಪಾವಳಿ ಸಂಭ್ರಮಾಚರಣೆ ಬಾರಿ ವಿಜೃಂಭಣೆಯಿಂದ ಜರಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಯ ಅಧ್ಯಕ್ಷರು ವಹಿಸಿ ಸರ್ವರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ದೈಹಿಕ ಶಿಕ್ಷಕರು ಯೋಗ ಶಿಕ್ಷಕರೂ ಆದ ಶ್ರೀಯುತ ಶೇಖರ್ ಕಡ್ತಳ ವಾಮಂಜೂರು ಮಾತನಾಡಿ ದೀಪಾವಳಿಯ ಆಚರಣೆ ಮಹತ್ವ ಹಾಗೂ ಹಿನ್ನೆಲೆ ಯ ಬಗ್ಗೆ ಮಾಹಿತಿ ನೀಡಿದರು ತರುವಾಯ ಗೋಪೂಜೆ, ಬಲಿಂದ್ರ ಪೂಜೆ, ಹಣತೆಗಳನ್ನು ಬೆಳಗಿಸಿ ಸುಡುಮದ್ದುಗಳೊಂದಿಗೆ ವೈಶಿಷ್ಟ ಪೂರ್ಣ ದೀಪಾವಳಿ ಆಚರಣೆ ಮಾಡಲಾಯಿತು. ಸ್ಥಾಪಕ ದಿನಾಚರಣೆ ಅಂಗವಾಗಿ ಕ್ಲಬ್ ನ ಚಾರ್ಟರ್ ಗೆ ಪುಷ್ಪ ನಮನ ಸಲ್ಲಿಸಲಾಯಿತು ತರುವಾಯ ಕ್ಲಬ್ ನಡೆದು ಬಂದ ದಾರಿ ಹಾಗೂ ಕ್ಲಬ್ಬಿನ ಹೇಳು ಬೀಳುಗಳ ಬಗ್ಗೆ ಸ್ಥಾಪಕ ಸದಸ್ಯರಾದ ಓಸ್ವಾಲ್ಡ್ ಡಿಸೋಜ ಮಾಹಿತಿ ನೀಡಿದರು. ಸ್ಥಾಪಕ ಸದಸ್ಯರುಗಳಾದ ಅಶೋಕ್ ನಾಯಕ್ ಮುಕ್ತಾನಂದ ಶೆಟ್ಟಿ ಮೇಲ್ವಿನ್ ಸಲ್ದಾನ ಓಸ್ವಾಲ್ಡ್ ಡಿಸೋಜಾ ರೋಷನ್ ಡಿಸೋಜಾ ರವರನ್ನು ಹಾಗೂ ಕ್ಲಬ್ಬಿನ ಎಕ್ಸ್ಟೆಂಶನ್ ಚರ್ಮನ್ ಕಿನ್ನಿಗೋಳಿ ಕ್ಲಬ್ಬಿನ ಮೋಹನ್ ದಾಸ್ ಶೆಟ್ಟಿ ಗೈಡಿಂಗ್ ಲಯನ್ ಫ್ರಾನ್ಸಿಸ್ ಸೆರಾವೋ, ಅವರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಾಂತ್ಯ11 ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಶುಭ ಸಂಸನೆ ಗೈದರು ವಲಯ ಅಧ್ಯಕ್ಷರಾದ ರೋಷನ್ ಡಿಸೋಜ, ಮುಕ್ತನಂದ ಶೆಟ್ಟಿ, ಅನಿತಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಮುರಳಿದರ್ ನಿರ್ವಹಿಸಿದರು ಮೇಲ್ವಿನ್ ಸಲ್ದಾನ ಧನ್ಯವಾದ ಅರ್ಪಿಸಿದರು.
ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಯಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ದೀಪಾವಳಿ ಸಂಭ್ರಮಾಚರಣೆ
RELATED ARTICLES