ಕಾರ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಕಾರ್ಕಳ ಹಾಗೂ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇವರ ಸಹಯೋಗದೊಂದಿಗೆ ಸಾಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀಮತಿ ಅಶ್ವಿತಾ ಶೆಟ್ಟಿ ಮಾಲಕರು ಕಾರ್ಲ ಸೂಪರ್ ಮಾರ್ಟ್ ಬೈಲೂರು ಇವರು ಉದ್ಘಾಟಿಸಿದರು.
ಈ ಕಾಯ೯ಕ್ರಮದ ಸಭಾಧ್ಯಕ್ಷರಾಗಿದ್ದ ಶ್ರೀಯುತ ಭಾಸ್ಕರ್ ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರು ಮಾತನಾಡತ್ತಾಪ್ರತಿಭಾಕಾರಂಜಿಯು ನಮ್ಮ ಇಲಾಖೆಯ ಹೆಮ್ಮೆಯ ಕಾರ್ಯಕ್ರಮ. ಮಕ್ಕಳು ಪಠ್ಯಕ್ಕೆ ಮಾತ್ರ ಒತ್ತು ಕೊಡುತ್ತಾರೆ ಎಂಬಅಪವಾದವನ್ನು ಇತ್ತೀಚಿನ ಪ್ರತಿಭಾ ಕಾರಂಜಿಯು ಹೋಗಲಾಡಿಸಿದೆ. ಮಕ್ಕಳಲ್ಲಿ ಕೌಶಲ್ಯಗಳಿವೆ. ಅದನ್ನು ಗುರುತಿಸುವಂತಹಜವಾಬ್ದಾರಿ ಶಿಕ್ಷಕರಲ್ಲಿದೆ. ಈ ಕಾರ್ಯಕ್ರಮ ಮಕ್ಕಳಿಗೆ ಜೀವನ ಕೌಶಲ್ಯಗಳನ್ನು ಕಲ್ಪಿಸಿಕೊಡುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಕಳದ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಜ್ಯೋತಿ ನಾಯಕ್ ರವರು ಮಾತನಾಡುತ್ತಾ, ಪಾಠ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬಹು ಮುಖ್ಯ ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಾಲಕೃಷ್ಣ ನಾಯಕ್ರವರು, ಪ್ರತಿಭಾ ಕಾರಂಜಿ ತಯಾರಿಯು ಈ ಶಾಲೆಯಲ್ಲಿ ಬಹಳ ಉತ್ತಮ ರೀತಿಯಲ್ಲಿ ಆಗಿದೆ ಎಂದರು. ಪ್ರಭಾಕರ್ ಕೊಂಡಳ್ಳಿಯವರು, “ಅಕ್ಷರ ಇಲ್ಲದ ಮಂತ್ರ ಇಲ್ಲ, ಪ್ರತಿಭೆ ಇಲ್ಲದ ಮಗು ಇಲ್ಲ” ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಇದೆ. ಈ ವೇದಿಕೆಯನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎನ್ನುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಅಶ್ವಿತಾ ಶೆಟ್ಟಿಯವರು, ಭಾಸ್ಕರ್ ಟಿ, ಸಂತೋಷ್ ಕುಮಾರ್ ಶೆಟ್ಟಿ, ಬಾಲಕೃಷ್ಣ ನಾಯಕ್, ಪ್ರಕಾಶ್, ಜ್ಯೋತಿ ನಾಯಕ್, ಜೆಸಿ ವಿಘ್ನೇಶ್ ರಾವ್, ಪ್ರಕಾಶ್ ಕೊಂಡಳ್ಳಿ, ಉಮೇಶ್, ಶಾಂತ ಹೆಗ್ಡೆ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.