ಬಹ್ರೇಚ್: ಉತ್ತರ ಪ್ರದೇಶದ ಬಹ್ರೇಚ್‌ನಲ್ಲಿ ಎಂಟು ಮಂದಿಯ ಬಲಿ ಪಡೆದು, ಕನಿಷ್ಠ 15 ಮಂದಿಗೆ ಗಾಯಗೊಳಿಸಲು ಕಾರಣವಾದ ನಾಲ್ಕು ತೋಳಗಳನ್ನು ಬೋನಿಗೆ ಹಾಕುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಎರಡು ತೋಳಗಳು ಇನ್ನೂ ಅಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳನ್ನೂ ಹಿಡಿಯಲು ಕಾರ್ಯಾಚರಣೆ ಮುಂದುವರಿದಿದೆ.
ಕಳೆದ 45 ದಿನಗಳಿಂದ ಅಟ್ಟಹಾಸಗೈದಿರುವ ತೋಳಗಳು ಸರಣಿ ದಾಳಿಗಳಲ್ಲಿ ವಿವಿಧ ಗ್ರಾಮಗಳ ಎಂಟು ಮಂದಿಯನ್ನು ಬಲಿ ಪಡೆದಿವೆ. ಆರು ಮಕ್ಕಳು ಮತ್ತು ಒಬ್ಬ ಮಹಿಳೆ ಮೃತರಲ್ಲಿ ಸೇರಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…