Sunday, July 21, 2024
Homeಅಪರಾಧಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು ನಂಬಿಸಿ ವಂಚನೆ 54,74,000 ರೂ ಹಣ ವಂಚನೆ

ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು ನಂಬಿಸಿ ವಂಚನೆ 54,74,000 ರೂ ಹಣ ವಂಚನೆ

ಉಡುಪಿ: ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೋರ್ವ ಮಹಿಳೆಯೋರ್ವರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಉಡುಪಿ ಹೆಬ್ರಿಯ ಪೇತ್ರಿಯಲ್ಲಿ ನಡೆದಿದೆ. ಈ ಬಗ್ಗೆ ಹೆಬ್ರಿ ಪೇತ್ರಿ ನಿವಾಸಿ ಲವೀನಾ ಸ್ಟೆಫನಿ ಕ್ರಾಸ್ಟೊ (42) ಎಂಬುವವರು ದೂರು ನೀಡಿದ್ದಾರೆ.

ಕರೆನ್ಸಿ ಇದ್ದು, ಇದನ್ನು ಪಡೆಯಲು ಪಾರ್ಸೆಲ್ ಚಾರ್ಜ್‌, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಹಾಗೂ ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ. ಅದನ್ನು ನಂಬಿ ಅಪರಿಚಿತ ಸೂಚಿಸಿದಂತೆ ಬ್ಯಾಂಕ್ ಖಾತೆಗಳಿಗೆ, ಗೂಗಲ್ ಪೇ ಗಳಿಗೆ ಹಂತ ಹಂತವಾಗಿ ಒಟ್ಟು ರೂಪಾಯಿ 54,74,000 ರೂ. ಹಣವನ್ನು ಪಾವತಿಸಿ ದೂರುದಾರರು ದೂರಿನಲ್ಲಿ ತಿಳಿಸಿದ್ದಾರೆ.

ದೂರುದಾರರು ಪಾವತಿಸಿದ ಲಕ್ಷಾಂತರ ರೂ. ಹಣವನ್ನು ಪಡೆದು ಆರೋಪಿಗಳು ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ಮರಳಿ ನೀಡದೇ ವಂಚಿಸಿರುವುದಾಗಿ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಸೆಕ್ಷನ್ 66(ಸಿ), 66(ಡಿ) ಐ.ಟಿ. ಕಾಯಿದೆ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

RELATED ARTICLES
- Advertisment -
Google search engine

Most Popular