ಹುಬ್ಬಳ್ಳಿ: ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಕ್ರೈಂ ಬ್ರಾಂಚ್ ನ ಅಧಿಕಾರಿಗಳೆಂದು ಹೇಳಿಕೊಂಡು ಬಂದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಳೇಹುಬ್ಬಳ್ಳಿ ಕೃಷ್ಣಾಪುರ ಓಣಿಯ ಚೇತನ ಹಡಪದ, ಲಿಂಗಸಗೂರಿನ ಪರಶುರಾಮ ಗೌಡ ಪಾಟೀಲ, ಗಂಗಾವತಿ ಕಾರಟಗಿಯ ಮಧು ಎಂದ ಬಂಧಿತರು. ಬಂಧಿತರಿಂದ ಎರಡು ಮೊಬೈಲ್ ಫೋನ್, ಒಂದು ಬುಲೆಟ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಹಳೇ ಹುಬ್ಬಳ್ಳಿಯ ಚೈತನ್ಯ ಎಂಬವರಿಗೆ ಸಿಐಡಿ ಕ್ರೈಂ ಬ್ರಾಂಚ್ ಪೊಲೀಸರೆಂದು ಹೇಳಿಕೊಂಡು ಇವರು ಮೋಸ ಮಾಡಿದ್ದರು. ಹೆದರಿಸಿ ಹಣಪಡೆದಿದ್ದ ಇವರ ವಿರುದ್ಧ ಮಹಿಳೆ ಪೊಲೀಸ್ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡು ಮೂವರನ್ನು ಬಂಧಿಸಿದ್ದಾರೆ.