Thursday, July 25, 2024
Homeಮಂಗಳೂರುರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳೂರು ಹಳೆಯಂಗಡಿ ವತಿಯಿಂದ ಉಚಿತ ಪುಸ್ತಕ ವಿತರಣೆ

ರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳೂರು ಹಳೆಯಂಗಡಿ ವತಿಯಿಂದ ಉಚಿತ ಪುಸ್ತಕ ವಿತರಣೆ

ಹಳೆಯಂಗಡಿ: ರಿಲಯನ್ಸ್ ಎಸೋಸಿಯೇಶನ್(ರಿ) ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ತೈತೋಟ ಚಾರಿಟೇಬಲ್ ಟ್ರಸ್ಟ್ ಬೊಳ್ಳೂರು ಇದರ ಪ್ರಾಯೋಜಕತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಇಂದಿರಾನಗರದ ರಿಲಯನ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೊಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ್, ನಾನು 2009 ರಿಂದ ಈ ಶಾಲೆಗೆ ಮುಖ್ಯ ಶಿಕ್ಷಕನಾಗಿ ಬಂದಿದ್ದೇನೆ ಪ್ರತಿ ವರ್ಷವು ಪುಸ್ತಕವನ್ನು ಬೇರೆಯವರಿಂದ ಕೇಳುತ್ತಿದ್ದೆವು, 2010 ರಿಂದ ರಿಲಯನ್ಸ್ ಎಸೋಸಿಯೇಶನ್ ಸಂಸ್ಥೆಯೊಂದಿಗೆ ಮನವಿ ಮಾಡಿದಾಗ ಉತ್ತಮ ರೀತಿಯಲ್ಲಿ ಸ್ಪಂದಿಸಿ ಇನ್ನು ಮುಂದೆ ಪ್ರತಿ ವರ್ಷವು ನಾವು ಕೊಡುತ್ತೇವೆ ಎಂಬ ಭರವಸೆಯನ್ನು ನೀಡಿ ಈದೀಗ 15 ವರ್ಷದಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಪುಸ್ತಕ ಕೊಡುತ್ತ ಬಂದಿರುತ್ತಾರೆ. ಇವರೆಲ್ಲರಿಗೂ ನಾನು ಶಾಲೆಯ ಪರವಾಗಿ ಮತ್ತು SDM ಸಮಿತಿಯ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ. ಹಾಗು ನಿಮ್ಮ ಸಂಸ್ಥೆಯ ಸಹಕಾರ ದೊರಕಿದರೆ ಈ ಶಾಲೆಯಿಂದಲೇ LKG, UKG ಇಂಗ್ಲಿಷ್ ಮಾಧ್ಯಮ ಶಾಲೆ ಪ್ರಾರಂಭಿಸಬಹುದು ಎಂದು ಮತ್ತೋಮ್ಮೆ ಇಂಗಿತ ವ್ಯಕ್ತಪಡಿಸಿದರು.

ರಿಲಯನ್ಸ್ ಎಸೋಸಿಯೇಶನ್ ಅಧ್ಯಕ್ಷ ಶಮೀಮ್ ಬೊಳ್ಳೂರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹಳೆಯಂಗಡಿ ಗ್ರಾ.ಪಂ. ಸದಸ್ಯ ಅಝೀಝ್ ಐ.ಎ.ಕೆ, ರಿಲಯನ್ಸ್ ಸೌದಿ ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್, ಹಾಗು ಬೊಳ್ಳೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇಷ್ಮಾ ಉಪಸ್ಥಿತರಿದ್ದರು.

ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಕಲಂದರ್ ಕೌಶಿಕ್, ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು, ಸಂಸ್ಥೆಯ ಸದಸ್ಯರಾದ ಮಮ್ತಾಜ್ ಕಲ್ಲಾಪು, ಶಮೀಮ್ ನವರಂಗ್ ಹಾಗು ಇನ್ನಿತರ ಸದಸ್ಯರು ಹಾಜರಿದ್ದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಎಂ.ಎ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಬ್ದುಲ್ ಮುಬಾರಕ್ ವಂದಿಸಿದರು.

RELATED ARTICLES
- Advertisment -
Google search engine

Most Popular