ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಮಂಗಳೂರು, ಜಿಲ್ಲಾಡಳಿತ,ದ.ಕ.ಜಿಲ್ಲಾ ಪಂಚಾಯತ್,ಗ್ರಾಮ ಪಂಚಾಯತ್ ಪಡುಪಣಂಬೂರು, ತಾಲೂಕು ಮತ್ತು ಜಿಲ್ಲಾ ಯುವ ಜನ ಒಕ್ಕೂಟ,ದ.ಕ.ಜಿಲ್ಲೆ ಇವರುಗಳ ಮಾರ್ಗದರ್ಶನದಲ್ಲಿ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು, ಆಸ್ಪತ್ರೆ, ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ,ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ದೇರಳಕಟ್ಟೆ,ಇವರ ಸಹಯೋಗದೊಂದಿಗೆ ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.)ತೋಕೂರು, ಹಳೆಯಂಗಡಿ. ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ(ರಿ)ಹಳೆಯಂಗಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ,ನಾಗವೃಜ ಕ್ಷೇತ್ರ ಪಾವಂಜೆ, ಪ್ರಿಯದರ್ಶಿನಿ ಕೋ ಓಪರೇಟಿವ್ ಸೊಸೈಟಿ ಲಿಮಿಟೆಡ್,ಹಳೆಯಂಗಡಿಇವರ ಸಹಕಾರದಲ್ಲಿ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ 25.08.2024, ಭಾನುವಾರ ಸಮಯ ಬೆಳಗ್ಗೆ ಘಂಟೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಆಯೋಜಿಸಲಾಗಿತ್ತು.
ಶಿಬಿರವು ಸಭಾ-ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು.ವೇದಿಕೆಯಲ್ಲಿ ಅತಿಥಿಗಳ ಆಸನ ಸ್ವೀಕಾರದ ಆನಂತರ ಮಹಿಳಾ ಸದಸ್ಯೆಯರಾದ ಪ್ರಮೀಳಾ.ಕೆ.ದೇವಾಡಿಗ, ಪ್ರಮೀಳಾ.ಹೆಚ್ ಪ್ರಾರ್ಥಿಸಿದರು.ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು, ದೀಪಕ್ ಸುವರ್ಣ ಪ್ರಾಸ್ತಾವಿಕ ನುಡಿಗಳೊಂದಿಗೆ ಅಥಿತಿ ಗಣ್ಯರನ್ನು ಮತ್ತು ಸಭಿಕರನ್ನು ಸ್ವಾಗತಿಸಿದರು.ಆಟೋ ರಿಕ್ಷಾ ಚಾಲಕರ ಮತ್ತು ಮಾಲ್ಹಕರ ಸಂಘದ ಅಧ್ಯಕ್ಷರಾದ ನಾಗೇಶ್,ಪ್ರಧಾನ ಕಾರ್ಯದರ್ಶಿ ಸೋಮನಾಥ್, ಸ್ಪೋರ್ಟ್ ಕ್ಲಬ್ ನ ಆರೋಗ್ಯ ನಿಧಿ ಕಾರ್ಯದರ್ಶಿ ಜಗದೀಶ್ ಕೋಟ್ಯಾನ್,ಮಹಿಳಾ ಜೊತೆ ಕಾರ್ಯದರ್ಶಿ ಸುರೇಖಾ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ನೀಮಾ ಸನಿಲ್,ಸದಸ್ಯರಾದ ಧರ್ಮಾನಂದ ಶೆಟ್ಟಿಗಾರ್, ಪ್ರಮೋದ್ ಆಚಾರ್ಯ ವೇದಿಕೆಯಲ್ಲಿದ್ದ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಎಚ್.ವಸಂತ ಬೆರ್ನಾಡ್,ಅಧ್ಯಕ್ಷರು ಪ್ರಿಯದರ್ಶಿನಿ ಕೋ.ಓಪರೇಟಿವ್ ಸೊಸೈಟಿ ಲಿಮಿಟೆಡ್,ಹಳೆಯಂಗಡಿ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಸದಸ್ಯರಾದ ಮೋಹನ್ ದಾಸ್ ಮಾತನಾಡಿ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗಾಗಿ ನಾವು ಸಂಪೂರ್ಣ ಸಹಕಾರ ನೀಡಿ ಶ್ರಮಿಸುವುದಾಗಿ ತಿಳಿಸಿದರು. ಅಲ್ಲದೆ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಜನಪರ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.▪️ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ|ಸುಪ್ರಿಯಾ ಉಪನ್ಯಾಸಕರು ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ,ದೇರಳಕಟ್ಟೆ ಅವರು ಮಾತನಾಡಿ ಆರೋಗ್ಯ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಇನ್ನೋರ್ವ ಅತಿಥಿ ಶ್ರೀಮತಿ ಡಾ|ಸ್ನೇಹ ಮೆಡಿಕಲ್ ಆಫೀಸರ್ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನೆಪೋಯ,ದೇರಳಕಟ್ಟೆ ಇವರು ಮಾತನಾಡಿ ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳ ಮುಖಾಂತರ ಹಮ್ಮಿಕೊಳ್ಳಲಾಗುವ ಉಚಿತ ವೈದ್ಯಕೀಯ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಶೀಂದ್ರ ಎಮ್ ಸಾಲ್ಯಾನ್ ಗೌರವಾಧ್ಯಕ್ಷರು, ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ),ಹಳೆಯಂಗಡಿ,ಅವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯದ ಸುರಕ್ಷತೆಯ ವತಿಯಿಂದ ಹಮ್ಮಿಕೊಳ್ಳಲಾಗುವ ಇಂತಹ ಉಚಿತ ವೈದ್ಯಕೀಯ ಶಿಬಿರದ ಮಹತ್ವದ ಬಗ್ಗೆ ವಿವರಿಸಿದರು.ವೇದಿಕೆಯಲ್ಲಿ ಜೈ ಕೃಷ್ಣ. ಬಿ. ಕೋಟ್ಯಾನ್ ಗೌರವಾಧ್ಯಕ್ಷರು ಪೂಜಾ ಫ್ರೆಂಡ್ಸ್ ಹಳೆಯಂಗಡಿ,
ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ದಂತ ವಿಭಾಗದ ಸoಯೋಜಕರಾದ ಭರತ್ ಕುಮಾರ್ ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷರು, ಪ್ರಶಾಂತ್ ಕುಮಾರ್ ಬೇಕಲ್,ಅಧ್ಯಕ್ಷರು ದೀಪಕ್ ಸುವರ್ಣ,
ಮಹಿಳಾ ಕಾರ್ಯಧ್ಯಕ್ಷೆ ಯಶೋಧ ದೇವಾಡಿಗ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಡುಪಣಂಬೂರು ಇಲ್ಲಿನ ಸದಸ್ಯ ಸಂತೋಷ್ ಕುಮಾರ್,ಮಾಜಿ ಸದಸ್ಯ ನಾರಾಯಣ ಸುವರ್ಣ,ಸ್ಫೋರ್ಟ್ಸ್ ಕ್ಲಬ್ ನ ಕಾರ್ಯದ್ಯಕ್ಷ ಸಂತೋಷ್ ದೇವಾಡಿಗ,ಮಾಜಿ ಅಧ್ಯಕ್ಷರುಗಳಾದ ಸುರೇಶ್ ಶೆಟ್ಟಿ, ಜಗದೀಶ್ ಕುಲಾಲ್, ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ದಂತ ವಿಭಾಗ ಯೆನೆಪೋಯ ಇಲ್ಲಿನ ವೈದ್ಯಕೀಯ ವರ್ಗದವರು ಹಾಗೂ ಸಿಬ್ಬಂದಿಗಳು,ಜಂಟಿ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು, ಸದಸ್ಯೆಯರು,ಗ್ರಾಮಸ್ಥರು ಉಪಸ್ಥರಿದ್ದರು.
ಶಿಬಿರದಲ್ಲಿ ಲಭ್ಯವಿದ್ದ ಉಚಿತ ದಂತ ಸೇವೆಗಳು:
1) ಉಚಿತ ದಂತ ತಪಾಸಣೆ ಮತ್ತು ಸಲಹೆ.
2) ಚಿಕ್ಕ ಚಿಕ್ಕ ಹಲ್ಲುಗಳ ತುಂಬಿಸುವಿಕೆ.
3) ಚಿಕಿತ್ಸೆಗೆ ಒಳಪಡದ ಹಲ್ಲುಗಳನ್ನು ಕೀಳಿಸುವುದು.
4) ಹಲ್ಲುಗಳ ಶುಚಿಕರಣ
ಅಲ್ಲದೆ, ಉಚಿತವಾಗಿ ನೇತ್ರ ತಪಾಸಣೆ,ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ಕೂಡ ನಡೆಸಲಾಯಿತು.ಶಿಬಿರದಲ್ಲಿ ಔಷಧಿಗಳನ್ನು ಮತ್ತು 75 ಕನ್ನಡಕ್ಕಗಳನ್ನು ಸಂಪೂರ್ಣ ಉಚಿತವಾಗಿ ವಿತರಿಸಲಾಯಿತು.
ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಶಿಬಿರಾರ್ಥಿಗಳಿಗೆ ಯೆನೆಪೋಯ ಆಸ್ಪತ್ರೆಯ ಹಸಿರು ಕಾರ್ಡನ್ನು ನೀಡಲಾಯಿತು.
ಗ್ರಾಮೀಣ ಭಾಗದ ಸುಮಾರು ನೂರಕ್ಕೂ ಹೆಚ್ಚು ಜನರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಫೋರ್ಟ್ಸ್ ಕ್ಲಬ್ ನ ಜೊತೆ ಕಾರ್ಯದರ್ಶಿ ಚಂದ್ರ ಸುವರ್ಣ ವಂದಿಸಿದರು.
ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ,ಕೋಶಾಧಿಕಾರಿ ಸುನೀಲ್ ದೇವಾಡಿಗ,ಸದಸ್ಯ ಗಣೇಶ್ ದೇವಾಡಿಗ ಪಂಜ ಸಹಕರಿಸಿದರು. ಸ್ಫೋರ್ಟ್ಸ್ ಕ್ಲಬ್ ನ ಸಾಂಸ್ಕೃತಿಕ ಕಾರ್ಯದರ್ಶಿ ಗೀತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.