ಬದಿಯಡ್ಕ : ಕೌಮುದಿ ಗ್ರಾಮೀಣ ನೇತ್ರಾಲಯ ಮತ್ತು ಅಚೀವ್ ಟ್ರಸ್ಟ್ ನ ನೇತೃತ್ವದಲ್ಲಿ ಉಚಿತ ಕಣ್ಣು ತಪಾಸಣೆ ಮತ್ತು ಪೊರೆ ನಿರ್ಣಯ ಶಿಬಿರವು ಡಿ. 22 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಬೇಳ ಕುಮಾರಮಂಗಲ ಕೌಮುದಿ ಗ್ರಾಮೀಣ ನೇತ್ರಾಲಯದಲ್ಲಿ ನಡೆಯಲ್ಲಿದೆ.
ನೇತ್ರ ತಜ್ಞರಾದ ಡಾ. ಎನ್. ಸುನಿಲ್ ಮತ್ತು ಡಾ. ವಿನಯ ಗೌಡ ಅವರು ತಪಾಸಣೆ ನಡೆಸುವರು. ಡಾ. ಜಿತಿನ್ ಮೋಹನ್ ಜನರಲ್ ಮೆಡಿಸಿನ್, ಕನ್ಸಲ್ಟೆಂಟ್ ಫಿಸಿಷಿಯನ್ ಅವರ ಸೇವೆಯು ಶಿಬಿರದಲ್ಲಿ ಲಭ್ಯವಿರುವುದು. ಶಿಬಿರದಲ್ಲಿ ಭಾಗವಹಿಸುವವರು ಹೆಸರನ್ನು ನೊಂದಾಯಿಸಲು ನೇರವಾಗಿ ಅಥವಾ 9446544155 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.