ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕೇರಳ ಗಡಿನಾಡ ಶಾಖೆ ಮತ್ತು ಗೀತಜ್ಞಾನ ಯಜ್ಷ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೇರಳ ರಾಜ್ಯ, ಕಾಸರಗೋಡು ಜಿಲ್ಲೆಯ ಮಲ್ಲಂಗೈ ಏಕಾಹ ಭಜನಾ ಸಭಾಂಗಣದಲ್ಲಿ ಏಪ್ರಿಲ್ 16ರಿಂದ 27 ರವರೆಗೆ ವಸಂತಋತು ಬೇಸಿಗೆ ರಜಾ ಪ್ರಯುಕ್ತ “ಗೀತ ಕುಂಚ” ಶಿಬಿರವನ್ನು ಮಕ್ಕಳಿಗೆ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಜಯಲಕ್ಷ್ಮಿ ಕಾರಂತ್ ತಿಳಿಸಿದ್ದಾರೆ. ಪ್ರತಿದಿನ ಅಪರಾಹ್ನ 3 ರಿಂದ ಸಂಜೆ 5 ರವರೆಗೆ ಭಗದ್ಗೀತೆ, ಕಂಠಪಾಠ, ಒಳಾಂಗಣದಲ್ಲಿ ಆಟೋಟ, ಕುಣಿತ ಭಜನೆ, ಚಿತ್ರ ಬರೆಯವ ತರಬೇತಿ, ಭಾಗಗೀತೆ, ಭಕ್ತೀಗೀತೆ, ಜನಪದಗೀತೆ ಕಲಿಸುವುದು ಆರೋಗ್ಯದ ಕುರಿತು ಪ್ರಥಮ ಚಿಕಿತ್ಸೆ ಮಾಹಿತಿ, ರಸಪ್ರಶ್ನೆ ಇತರೆ ಕಲೆ, ಕೌಶಲ್ಯಗಳ ಮಾಹಿತಿ ತರಬೆತಿ ನೀಡಲಾಗುವುದು ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8050297104 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಈ ಉಚಿತ ಶಿಬಿರದ ಮುಖ್ಯಸ್ಥರಾದ ತಾರಾಲತಾ ವಿನಂತಿಸಿದ್ದಾರೆ.