ಜು.7ರಂದು ಕಡಂದಲೆಯಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ

0
176

ಮೂಡುಬಿದಿರೆ: ಶ್ರೀಶಾ ಸೌಹಾರ್ಧ ಕೋ ಆಪರೇಟಿವ್‌ ಸೊಸೈಟಿ ಲಿ., ಮಂಗಳೂರು, ಯುವ ವಾಹಿನಿ (ರಿ), ಮೂಡುಬಿದಿರೆ ಘಟಕ, ಜೆಸಿಐ ಭಾರ್ಗವ ಮುಂಡ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ, ಕಡಂದಲೆ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಕಡಂದಲೆ, ಪಾಲಡ್ಕ, ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಮಂಡಳಿ, ಕಡಂದಲೆ, ಪಾಲಡ್ಕ ಇವರ ಸಹಕಾರದೊಂದಿಗೆ ಶ್ರೀ ಸತ್ಯಸಾಯಿ ಬಾಲ ವಿಕಾಸ ಕೇಂದ್ರ ಮಂಗಳಾದೇವಿ ಇದರ ಸಹಯೋಗದೊಂದಿಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಉಚಿತ ವೈದ್ಯಕೀಯ ಶಿಬಿರ ಮತ್ತು ಯೆನಪೋಯ ದಂತ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರ ತಂಡದಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಜು. 7ರಂದು ಆದಿತ್ಯವಾರ ಬೆಳಿಗ್ಗೆ 9.30ರಿಂದ 12.30ರವರೆಗೆ ಈ ಶಿಬಿರ ನಡೆಯಲಿದೆ. ಪಾಲಡ್ಕದ ಕಡಂದಲೆಯ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಶಿಬಿರ ನಡೆಯಲಿದೆ.
ಚರ್ಮ, ಎಲುಬು, ಕಣ್ಣು, ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ, ಕಿವಿ, ಮೂಗು, ಗಂಟಲು ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಜನರಲ್‌ ಚೆಕಪ್‌, ದಂತ ಚಿಕಿತ್ಸೆ ಮತ್ತು ತಪಾಸಣೆ ಮಾಡಲಾಗುವುದು. ಅಗತ್ಯ ಉಳ್ಳವರಿಗೆ ಕನ್ನಡಕ ಹಾಗೂ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ಕಾರ್ಯಕ್ರಮದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೇತ್ರ ದಾನ ಮಾಡಲು ಬಯಸುವವರು ಈ ವೇಳೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here