Wednesday, April 23, 2025
HomeUncategorizedನಾನಿಲ್ತಾರ್ ಕುಲಾಲ ಭವನದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಶಿಬಿರ, ಆಧಾರ್ ನೋಂದಣಿ ಶಿಬಿರ

ನಾನಿಲ್ತಾರ್ ಕುಲಾಲ ಭವನದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಶಿಬಿರ, ಆಧಾರ್ ನೋಂದಣಿ ಶಿಬಿರ

ನಾನಿಲ್ತಾರ್ ಕುಲಾಲ ಸಂಘ ಸಾಮಾಜಿಕ ಕಳಕಳಿ ಇರುವಂತಹ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿಸುತ್ತಿರುವುದು ನಿರಂತರ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದು ಹೆಮ್ಮೆ ಮೂಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ ತಿಳಿಸಿದರು. ಅವರು ತಾ 16/3/25 ನೇ ಆದಿತ್ಯವಾರ ಬೆಳಿಗ್ಗೆ ನಾನಿಲ್ತಾರ್ ಕುಲಾಲ ಭವನದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಶಿಬಿರ, ಅಧಾರ್ ನೋಂದಣಿ, ತಿದ್ದುಪಡಿ ಅಂಚೆ ಜನ ಸುರಕ್ಷಾ ಅಭಿಯಾನ, ಅಪಘಾತ ವಿಮೆ ಮತ್ತು ಕೇಂದ್ರ ಸರ್ಕಾರದ ಆಯುಶ್ಮಾನ್ ಭಾರತ್ ಯೋಜನೆ ನೋಂದಣಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ಅತೀ ಶೀಘ್ರದಲ್ಲಿ ಇದೇ ಸಂಘದ ಮುಂಬಾಗ ಪ್ರಾಥಮಿಕ ಆರೋಗ್ಯ ಕೇಂದ್ರ ತರೆಯುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಜಯರಾಮ್ ಕುಲಾಲ್ ಅಗ್ಗರಟ್ಟ ವಹಿಸಿ ಇಂತಹ ಸಾಮಾಜಿಕ ಚಟುವಟಿಕೆಗಳು ಜನರಿಗೆ ತುಂಬಾ ಉಪಯುಕ್ತ ವಾಗುತ್ತದೆ ಎಂದರೆ. ಕುಂಭ ನಿಧಿ ಸೊಸೈಟಿ ಅಧ್ಯಕ್ಷರಾದ ಶ್ರೀ ಕುಶ ಆರ್ ಮೂಲ್ಯ ಈ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ ಸಂಘದ ಅಧ್ಯಕ್ಷರ ಸಂಘದ ಕಾರ್ಯ ವೈಖರಿ ಶ್ಲಾಘಿಸಿದರು. ಮೂಂಡ್ಕುರು ಅಂಚೆ ಪಾಲಕರಾದ ಶ್ರೀ ಆನಂದ್ ಅಂಚೆ ಇಲಾಖೆಯ ಸವಲತ್ತುಗಳ ಬಗ್ಗೆ ತಿಳಿಸಿದರು. ಈಶ್ವರ್ ಮಲ್ಪೆ ತಂಡದ ಡಾ. ಅಂಕಿತ ಶ್ರವಣ ಸಮಸ್ಯೆ ಇರುವವರು ತಪಾಸಣೆ ಮಾಡುವುದು ಅತ್ಯಗತ್ಯ ಎಂದರು.
ಆಯುಶ್ಮಾನ್ ಭಾರತ್ ನೋಂದಣಿಯ ಶ್ರೀಮತಿ ಚೈತ್ರ, ಕಾಂತಾವರ ಕುಲಾಲ ಸಂಘಟನೆ ಅಧ್ಯಕ್ಷರಾದ ಶ್ರೀ ವಿಠಲ್ ಮೂಲ್ಯ, ಬೋಳ ಕುಲಾಲ ಸಂಘದ ಅಧ್ಯಕ್ಷ ಶ್ರೀ ಗಣೇಶ್ ಕುಲಾಲ್, ಸಂಘದ ಮಾಜಿ ಅಧ್ಯಕ್ಷರಾದ ಮಂಜ್ಜಪ್ಪ ಮೂಲ್ಯ, ಬೂಗ್ಗು ಮೂಲ್ಯ ಬೆಲಾಡಿ, ಜಗನ್ನಾಥ್ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಆಶಾ ವರದರಾಜ್ ಪ್ರಾರ್ಥನೆ ನೆರವೇರಿಸಿ. ಸಂಘದ ಕಾರ್ಯದರ್ಶಿ ದಿನೇಶ್ ಕುಮಾರ್, ಮತ್ತು ಶಿಕ್ಷಕ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿ ಮಹಿಳಾ ಘಟಕದ ಅಧ್ಯಕ್ಷೆ ಪ್ರತೀಮ ಶ್ರೀಧರ್ ವಂದಿಸಿದ

RELATED ARTICLES
- Advertisment -
Google search engine

Most Popular