Tuesday, April 22, 2025
Homeಉಜಿರೆಉಚಿತ ಸಾಮೂಹಿಕ ವಿವಾಹ: ನೋಂದಣಿ ಕಛೇರಿ ಉದ್ಘಾಟನೆ

ಉಚಿತ ಸಾಮೂಹಿಕ ವಿವಾಹ: ನೋಂದಣಿ ಕಛೇರಿ ಉದ್ಘಾಟನೆ

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ 2025 ರ ಮೇ 3 ರಂದು ಶನಿವಾರ ಸಂಜೆ ಗಂಟೆ 6.48 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ವಿವಾಹ ನೋಂದಣಿ ಕಛೇರಿಯನ್ನು ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಭಾನುವಾರ ಎಸ್.ಡಿ.ಎಂ. ಧರ್ಮೋತ್ಥಾನ ಟ್ರಸ್ಟ್ನ ಕಾರ್ಯದರ್ಶಿ ಎ.ವಿ. ಶೆಟ್ಟಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೇವಳ ಪಾರುಪತ್ಯಗಾರ್ ಲಕ್ಷ್ಮೀ ನಾರಾಯಾಣ ರಾವ್,  ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್, ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯಪ್ರಸಾದ್, ನಿವೃತ್ತ ಮುಖ್ಯೋಪಾಧ್ಯಾಯ ಧರ್ಣಪ್ಪ ಮಾಸ್ಟರ್, ಸಂತೋಷ್ ಗೌಡ, ಶಿವರಾಮ್, ಪವಿತ್ರ, ಭವಾನಿ, ಮಂಜುಳಾ ಉಪಸ್ಥಿತರಿದ್ದರು.

ಸಾಮೂಹಿಕ ವಿವಾಹದ ಎಲ್ಲಾ ವೆಚ್ಚವನ್ನು ಧರ್ಮೋತ್ಥಾನ ಟ್ರಸ್ಟ್ ವತಿಯಿಂದ  ನಿರ್ವಹಿಸಲಿದ್ದು, ಈ ಸಮಾರಂಭದಲ್ಲಿ ಮದುವೆಯಾಗಲಿಚ್ಛಿಸುವವರು ಏಪ್ರಿಲ್ 25 ರೊಳಗೆ ಹೆಸರು ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0825626644,9663464648,8147263422.

RELATED ARTICLES
- Advertisment -
Google search engine

Most Popular