Saturday, April 19, 2025
Homeಮಂಗಳೂರುಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ

ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ

ಬಂದಾರು: ಎಸ್ ಡಿ. ಎಮ್. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆ ಮೈರೋಳ್ತಡ್ಕ, ಅಮೃತ ಮಹೋತ್ಸವ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘ ಮೈರೋಳ್ತಡ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಪ್ರಗತಿಬಂಧು ಒಕ್ಕೂಟ ಮೈರೋಳ್ತಡ್ಕ ಇದರ ಸಹಯೋಗದಲ್ಲಿ ಮಾರ್ಚ್ 16 ಭಾನುವಾರ ದಂದು ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ ಕೆ ಸಾಹುಲ್ ಹಮೀದ್ ರವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಮುಖ ಗಣ್ಯರು ಆಗಮಿಸಲಿದ್ದಾರೆ. ಶಿಬಿರದಲ್ಲಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು, ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ಸ್ತ್ರೀ ರೋಗ ತಜ್ಞರು, ಕಿವಿ -ಮೂಗು -ಗಂಟಲು ತಜ್ಞರು, ಮಕ್ಕಳ ರೋಗ ತಜ್ಞರು, ಮೆಡಿಸಿನ್ ವಿಭಾಗ ತಜ್ಞರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular