ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಗ್ರಾಮ ಪಂಚಾಯತ್ ಇನ್ನಂಜೆ, ರೋಟರಿ ಕ್ಲಬ್ ಶಂಕರಪುರ, ಜೆ.ಸಿ.ಐ ಶಂಕರಪುರ ಜಾಸ್ಮಿನ್ ಯುವಕ ಮಂಡಲ ಇನ್ನಂಜೆ(ರಿ) ಯುವತಿ ಮಂಡಲ ಇನ್ನಂಜೆ(ರಿ), ರೋಟರಿ ಸಮುದಾಯ ದಳ ಇನ್ನಂಜೆ, ಮಹಿಳಾ ಮಂಡಳಿ ತನ್ನಂಜೆ (ರಿ) ಶ್ರೀನಿವಾಸ ದಂತ ವೈದ್ಯಕೀಯ ಮಹಾ ವಿದ್ಯಾಲಯ ಮುಕ್ಕ ಸುರತ್ಕಲ್ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದಡಿ ಇಂದು ದಿನಾಂಕ 10-02-2025 ರಂದು ಇನ್ನಂಜೆ ಯುವಕ ಮಂಡಲದಲ್ಲಿ ಆಯೋಜಿಸಲಾದ “ಉಚಿತ ಬಾಯಿ ಮತ್ತು ದಂತ ತಪಾಸಣಾ ಶಿಬಿರ ಹಾಗೂ ಚಿಕಿತ್ಸಾ ಶಿಬಿರ”ವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ, ಕಾಪು ತಾಲೂಕು ವೈದ್ಯಾಧಿಕಾರಿಗಳಾದ ವಾಸುದೇವ್ ಉಪಾಧ್ಯಾಯ, ರೋಟರಿ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು, ಜೆ.ಸಿ.ಐ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.