ದಾವಣಗೆರೆ:ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀಗಣೇಶೋತ್ಸವದ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡಿನಲ್ಲಿ ಶ್ರೀ ಗಣೇಶನ ಚಿತ್ರ ಬರೆಯುವ ರಾಜ್ಯ ಮಟ್ಟದ ಉಚಿತ ಚಿತ್ರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ
ತಿಳಿಸಿದ್ದಾರೆ.
ವಿವಿಧ ಕಲಾಪ್ರಕಾರಗಳಲ್ಲಿ ಶ್ರೀ ಗಣಪತಿ ಚಿತ್ರ ಬರೆದು ಕನ್ನಡದಲ್ಲಿ ಮನೆಯ ಪೂರ್ಣ ಪ್ರಮಾಣದ ವಿಳಾಸ, ಹಿರಿಯ, ಕಿರಿಯ ಕಲಾವಿದರ ವಯಸ್ಸು, ವ್ಯಾಟ್ಸಪ್ ನಂಬರ್ಬ ರೆದು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ
ಕಳಿಸಬಹುದು. ವಯಸ್ಸಿನ ಅನುಗುಣವಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಿ ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭವಿಲ್ಲದೇ ಬಹುಮಾನ ವಿಜೇತರಿಗೆ ಮಾತ್ರ ಅವರ ವ್ಯಾಟ್ಸಪ್ ಸಂಖ್ಯೆಗೆ ಫಲಿತಾಂಶ, ಅಭಿನಂದನಾ ಪತ್ರವನ್ನು ಕಳಿಸಲಾಗುವುದು.
ಚಿತ್ರ ಬರೆದು ಕಳಿಸುವ ವಿಳಾಸ :
ಕಲಾಕುಂಚ # 588, `ಕನ್ನಡ
ಕೃಪ’, ಮೊದಲನೇ ಮಹಡಿ, ಕುವೆಂಪು ರಸ್ತೆ,
ಕಸ್ತೂರ್ಬಾ ಬಡಾವಣೆ, ದಾವಣಗೆರೆ – ೫೭೭೦೦೨. ಹೆಚ್ಚಿನ
ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು.
ಚಿತ್ರ ಬರೆದು ಕಳಿಸುವ ಕೊನೆಯ ದಿನಾಂಕ 15/09/2024 ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.