ಉಡುಪಿ: ಆಸಕ್ತಿಯುಳ್ಳ ಆಸಕ್ತ ಗ್ರಾಮೀಣ ಯುವಕ, ಯುವತಿಯರಿಗೆ ರುಡ್ ಸೆಟ್ ಸಂಸ್ಥೆ, ಬ್ರಹ್ಮಾವರ, ಉಡುಪಿ ಜಿಲ್ಲೆ, ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ (ರಿ), 52ನೇ ಹೇರೂರು ವತಿಯಿಂದ ಉಚಿತ ಸ್ವ ಉದ್ಯೋಗ ತರಬೇತಿ ನೀಡಲಾಗುವುದು.
ಸಂಸ್ಥೆಯಲ್ಲಿ ನಡೆಯುವ ವಿವಿಧ ತರಬೇತಿಗಳ ವಿವರ:
* ಜೇನು ಸಾಕಾಣಿಕೆ ತರಬೇತಿ ಡಿ. 26ರಿಂದ ಜ. 4ರವರೆಗೆ (10ದಿನ)
* ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಡಿ.26ರಿಂದ ಜ.4ರವರೆಗೆ (10ದಿನ)
* ಮೇಣದಬತ್ತಿ ಮತ್ತು ಅಗರಬತ್ತಿ ತಯಾರಿಕೆ ತರಬೇತಿ. ಜ. 06ರಿಂದ ಜ. 15ರವರೆಗೆ (10ದಿನ )
* ಕಂಪ್ಯೂಟರೈಸ್ಡ್ ಅಕೌಂಟಿಂಗ್ ತರಬೇತಿ ಜ. 2ರಿಂದ 31ರವರೆಗೆ (30ದಿನ ) ನಡೆಯಲಿದೆ.
* ಗೃಹ ಉಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ತರಬೇತಿ ಜ. 17ರಿಂದ ಫೆ. 15ರವರೆಗೆ (30ದಿನ )
* ಕೋಳಿ ಸಾಕಾಣಿಕೆ ತರಬೇತಿ ಜ. 20.ರಿಂದ ಜ. 29ರವರೆಗೆ (10ದಿನ )
* ಸೆಣಬು ಬ್ಯಾಗ್ ತಯಾರಿಕೆ ತರಬೇತಿ ಫೆ. 1ರಿಂದ ಫೆ. 13ರವರೆಗೆ (13ದಿನ )
* ಕಂಪ್ಯೂಟರ್ ಡಿ.ಟಿ.ಪಿ. ತರಬೇತಿ ಫೆ.1ರಿಂದ ಫೆ. 15ರವರೆಗೆ (45ದಿನ)
* ಮೊಬೈಲ್ ರಿಪೇರಿ ಮತ್ತು ಸರ್ವಿಸ್ ತರಬೇತಿ. ದಿನಾಂಕ ಫೆ. 10ರಿಂದ ಫೆ. 11ರವರೆಗೆ (30ದಿನ )
* ವಸ್ತ್ರ ಚಿತ್ರಕಲಾ ಉದ್ಯಮಿ ( ಎಂಬ್ರಾಯ್ಡರಿ ಅಂಡ್ ಫ್ಯಾಬ್ರಿಕ್ ಪೇಂಟಿಂಗ್ )ತರಬೇತಿ ಫೆ. 17ರಿಂದ 18ರವರೆಗೆ (30ದಿನ ) ನಡೆಯಲಿದೆ. ತರಬೇತಿಯು ತಿಂಡಿ-ಊಟ-ವಸತಿ ಸಮವಸ್ತ್ರದೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ತರಬೇತಿಯು ನಡೆಯಲಿರುವುದು. ಆಸಕ್ತತರು ತಕ್ಷಣ ನಿಮ್ಮ ಹೆಸರು, ವಿಳಾಸ, ವಾಟ್ಸಪ್ ನಂ, ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ ಕಳುಹಿಸಬೇಕು.
9844086383,7022560492 8861325564,9591233748, 900889234, 9449862808. ತರಬೇತಿಯು 18-45 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಜೊತೆಗೆ ತರಬೇತಿಯಲ್ಲಿ ಉದ್ಯಮಕ್ಕೆ ಬೇಕಾಗಿರುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುವುದು. ಭಾಗವಹಿಸುವುವರು ಈ ಲಿಂಕ್‌ನ ಅರ್ಜಿಯನ್ನು ಸಲ್ಲಿಸಬಹುದು. https://forms.gle/ks4rqz9kFq89FKKPA ೆಂದು ಪ್ರಕಟಣೆ ತಿಳಿಸಿದೆ.