ಕಾರ್ಕಳ ತಾಲೂಕಿನ ಅಜೆಕಾರು ಮರ್ಣೆ ಗ್ರಾಮದ ಗುಡ್ಡೆಯಂಗಡಿ ಅಂಗನವಾಡಿ ಶಾಲೆಯಲ್ಲಿ ದಿನಾಂಕ 27 ರಂದು ಆಭರಣ ಜ್ಯುವೆಲ್ಲರ್ಸ್ ಕಾರ್ಕಳ, ಶ್ರೀರಾಮ್ ಜ್ಯುವೆಲ್ಲರ್ಸ್ ಹೆಬ್ರಿ, ತುಳುನಾಡ ತುಡರ್ ಖ್ಯಾತಿಯ ತುಳುನಾಡ ಟ್ರಸ್ಟ್ ಇದರ ರಾಜ್ಯ ಸಂಚಾಲಕರಾದ ಕೀರ್ತಿ ಕಾರ್ಕಳ ಹಾಗೂ ಇತರ ದಾನಿಗಳಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸುದಿನ ನ್ಯೂಸ್ ಡಿಜಿಟಲ್ ಮೀಡಿಯಾದ ಅರುಣ್ ಕುಮಾರ್ ಮರ್ಣೆ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ ವಿಜಯ ಗುಡ್ಡೆಯಂಗಡಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀವತ್ಸ ಹಾಗೂ ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಅಕ್ಷತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೀರ್ತಿ ಕಾರ್ಕಳ ಇವರು ಮಾತನಾಡಿ ಇನ್ನಷ್ಟು ದಾನಿಗಳಿಂದ ಬಡ ಶಾಲೆಗಳಿಗೆ ಸಹಾಯವನ್ನು ನೀಡಬೇಕಾಗಿ ವಿನಂತಿಸಿದರು. ಅಂಗನವಾಡಿಯ ಶಿಕ್ಷಕಿ ವಿದ್ಯಾ ಸ್ವಾಗತಿಸಿದರು. ಸಹಾಯಕಿ ರತ್ನಾವತಿ ಉಪಸ್ಥಿತರಿದ್ದರು ಹಾಗೂ ಶಾಲೆಗೆ ಕುಕ್ಕರನ್ನು ನೀಡಿದ ಪುಷ್ಪ ಆಚಾರ್ಯ ಇವರಿಗೂ ಧನ್ಯವಾದ ಸಲ್ಲಿಸಲಾಯಿತು.