Sunday, July 14, 2024
Homeರಾಜ್ಯಯಕ್ಷರಂಗದಿಂದ ಉಚಿತ ಯಕ್ಷಗಾನ ತರಬೇತಿ

ಯಕ್ಷರಂಗದಿಂದ ಉಚಿತ ಯಕ್ಷಗಾನ ತರಬೇತಿ

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ-ಯಕ್ಷಗಾನ ಸಂಸ್ಥೆಯಿಂದ ಸಾರ್ವಜನಿಕವಾಗಿ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 6:30 ರಿಂದ 8:30 ರವರೆಗೆ ಉಚಿತ ಯಕ್ಷಗಾನ ತರಬೇತಿ ನಡೆಯಲಿದೆ ಎಂದು ಸಂಸ್ಥೆಗಳ ಸಂಸ್ಥಾಪಕರು, ಹವ್ಯಾಸಿ ಯಕ್ಷಗಾನ ಕಲಾವಿದರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಹತ್ತು ವರ್ಷ ಮೇಲ್ಪಟ್ಟ ಮಕ್ಕಳೂ ಸೇರಿದಂತೆ ಪುರುಷರು, ಮಹಿಳೆಯರೂ ಭಾಗವಹಿಸಬಹುದಾಗಿದೆ ಯಕ್ಷಗಾನ ಕಲಾ ಪ್ರಕಾರಗಳ ಆಸಕ್ತರು, ತರಬೇತಿ ಹಾಗೂ ಹೆಚ್ಚಿನ ಮಾಹಿತಿಗೆ ಹೆಸರು ನೊಂದಾಯಿಸಲು 9901770315, 9481181446 ಈ ಸನೀಹವಾಣಿಗಳಿಗೆ ಸಂಪರ್ಕಿಸಲು ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ವಿನಂತಿಸಿದ್ದಾರೆ.

RELATED ARTICLES
- Advertisment -
Google search engine

Most Popular