ಫ್ರೆಂಡ್ಸ್ ಪಡುಪಣಂಬೂರು ಟ್ರೋಫಿ ಮತ್ತು ದಕ್ಷಿಣ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ಇದರ ಸಹಬಾಗಿತ್ವದಲ್ಲಿ ವಿಕಲಚೇತನ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಥಮ ವರ್ಷದ ಪುರುಷರ 65.ಕೆಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಇದೇ ಏಪ್ರಿಲ್ 5. 2025 ಶನಿವಾರದಂದು ಗಾಂಧಿ ಮೈದಾನ ಕಾರ್ನಾಡ್ ಮೂಲ್ಕಿಯಲ್ಲಿ ನಡೆಯಲಿದೆ.
ಈ ಪಂದ್ಯಾಟದ ಫ್ರೆಂಡ್ಸ್ ಪಡುಪಣಂಬೂರು ಟ್ರೋಫಿ 2025ರ ಚಾಲನೆಯನ್ನು ಈಗಾಗಲೇ ಮುಲ್ಕಿ ಸೀಮೆ ಅರಸರಾದ ಶ್ರೀ.ಎಂ. ದುಗ್ಗಣ್ಣ ಸಾವಂತರು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಫ್ರೆಂಡ್ಸ್ ಪಡುಪಣಂಬೂರು ಟೀಮ್ ನ ಸದಸ್ಯರು ಉಪಸ್ಥಿತರಿದ್ದರು.