ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಹಾಗೂ ಲಯನ್ಸ್ ಕ್ಲಬ್ ಬೆಳ್ಳಾರೇ ಜಲದುರ್ಗ ಕ್ಲಬ್ಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷರಾದ ಬಿ ಶಿವಪ್ರಸಾದ್ ಅವರ ನಿವಾಸದಲ್ಲಿ ಜರಗಿತು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷರಾದ ಬಿ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು ಎರಡು ಕ್ಲಬ್ ಗಳ ಸೇವಾ ಚಟುವಟಿಕೆ ಯನ್ನು ವಾಚಿಸಲಾಯಿತು.ಸೇವಾ ಚಟುವಟಿಕೆಯಾಗಿ ಈ ದಿನ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನ ನೀಡಲಾಯಿತು. ಲಯನ್ಸ್ ಕ್ಲಬ್ ಬೆಳ್ಳಾರೇ ಜಲದುರ್ಗ ಅಧ್ಯಕ್ಷರು ಉಷಾ ಭಟ್ ಹಾಗೂ ಸ್ಥಾಪಕ ಅಧ್ಯಕ್ಷರಾದ ವಿಟ್ಟಲ್ ಶೆಟ್ಟಿ ಲಯನ್ಸ್ ಕ್ಲಬ್ ಬೆಳ್ಳಾರೇ ಜಲದುರ್ಗ ಕಳೆದ ಎರಡುವರೆ ವರ್ಷಗಳಿಂದ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು ಹಾಗೂ ರೀಜನ್ ಅಂಬಾಸಿಡರ್ ರೇಣುಕಾ ಸದಾನಂದ ಜಾಕೆ ಅವರು ಶುಭಸಂಸನೆಗೈದರು. ಬಳಿಕ ಮಾತನಾಡಿದ್ದ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಬಪ್ಪನಾಡು ಸಂಸ್ಥೆಯನ್ನು ಪರಿಸರದ ರಕ್ಷಣೆ,ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ಹಾಗೂ ರಕ್ತದಾನ ಶಿಬಿರಗಳನ್ನು ಮಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷರಾದ ಬಿ ಶಿವಪ್ರಸಾದ್, ನಿಕಟ ಪೂರ್ವ ಅಧ್ಯಕ್ಷರಾದ ಸುಧೀರ್ ಎನ್ ಬಾಳಿಗ ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಪ್ರಾಂತ್ಯ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಲಯನ್ಸ್ ಕ್ಲಬ್ ಬೆಳ್ಳಾರೇ ಜಲದುರ್ಗ ಅಧ್ಯಕ್ಷರಾದ ಉಷಾ ಭಟ್ ಸ್ಥಾಪಕ ಅಧ್ಯಕ್ಷರಾದ ವಿಟಲ್ ಶೆಟ್ಟಿ ಕಾರ್ಯದರ್ಶಿ ಚೇತನ್ ಶೆಟ್ಟಿ, ರೀಜನ್ ಅಂಬಾಸಿಡರ್ ರೇಣುಕಾ ಸದಾನಂದ ಜಾಕೆ ಮೊದಲಾದವರು ಉಪಸ್ಥಿತರಿದ್ದರು