ದಾವಣಗೆರೆ-ದಾವಣಗೆರೆ ಜಿಲ್ಲೆಯ, ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಅಂತರಾಷ್ಟ್ರೀಯ ಕ್ರೀಡಾಪಟು, ಪವರ್ ಲಿಫ್ಟಿಂಗ್‌ನಲ್ಲಿ ಜೀವಮಾನ ಪ್ರಶಸ್ತಿ ಪುರಸ್ಕೃತರು, ಸ್ಟ್ರಾಂಗ್‌ಮ್ಯಾನ್ ಆಫ್ ಏಷ್ಯಾ ಪ್ರಶಸ್ತಿ, ರಾಜ್ಯ ಮಟ್ಟದ ೨೯ ಬಂಗಾರ ಪದಕ, ರಾಷ್ಟ್ರ ಮಟ್ಟದ ೧೯ ಚಿನ್ನದ ಪದಕ ಪಡೆದ ಎಂ.ಮಹೇಶ್ವರಯ್ಯನವರ ಸಾಧನೆಗಳನ್ನು ಗುರುತಿಸಿ, ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ “ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ದಾವಣಗೆರೆಯ ಶ್ರೀ ಬೀರಲಿಂಗೇಶ್ವರ ವ್ಯಾಯಾಮ ಶಾಲೆ, ಗ್ರೂಫ್ ಅಫ್ ಐರನ್ ಗೇಮ್ಸ್, ದಾವಣಗೆರೆ ನಗರಸಭೆ ವ್ಯಾಯಾಮ ಶಾಲೆಯ ಎಲ್ಲಾ ಹಿರಿಯ, ಕಿರಿಯ ಕ್ರೀಡಾಪಟುಗಳು, ಅಧಿಕಾರಿ ವರ್ಗದವರು, ಗಂಗನರಸಿ ಗ್ರಾಮಸ್ಥರು ಇವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ.