ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ. ಎರಡನೇ ಸೇವಾ ಯೋಜನೆಯನ್ನು ಕಲಿಯ ಗ್ರಾಮದ ಮೆರ್ಲ ಬೊಮ್ಮನ ಪೂಜಾರಿಯವರ ಮಗ ಹೂವಿನ ವ್ಯಾಪಾರ ಮಾಡುತ್ತಿದ್ದ ಶಿವರಾಮ ಇವರು ಗುರುವಾಯನಕೆರೆ ಹತ್ತಿರ ರಸ್ತೆ ಅಪಘಾತದಲ್ಲಿ ಒಂದುವರೆ ತಿಂಗಳಿನಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಶಿವರಾಮ ಇವರ ತಂದೆಗೆ ಸಹಾಯ ಧನವಾಗಿ 34,000 ಹಸ್ತಾಂತರಿಸಲಾಯಿತು. ವಾಟ್ಸಾಪ್ ಗ್ರೂಪಿನ ಅಡ್ಮಿನ್. ಬೆಳ್ತಂಗಡಿ ಟೈಲರ್ಸ್ ಅಸೋಸಿಯೇಷನ್ ವಲಯ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಜಾದೂಗಾರ ಬಿ.ಹೆಚ್. ರಾಜೀವ, ಕೆಸಿ ಕ್ಯಾಟರರ್ಸ್. ಮಾಲಕ ದೇವರಾಜ್, ಎಸ್ . ಆರ್ ಶಾಮಿಯಾನ ಮಾಲಕ ಯೋಗೀಶ್ ಗೇರುಕಟ್ಟೆ, ಜಯರಾಜ್ ನಡಕರ ಸುಖೇಶ್ ಪೂಜಾರಿ ಉಪಸ್ಥಿತರಿದ್ದರು.