Sunday, July 14, 2024
Homeರಾಜ್ಯಗಬ್ಬರ್ ಸಿಂಗ್ ತುಳು ಫಿಲಂ ನ ಪ್ರೀಮಿಯರ್ ಶೋ ಉದ್ಘಾಟನ ಸಮಾರಂಭ

ಗಬ್ಬರ್ ಸಿಂಗ್ ತುಳು ಫಿಲಂ ನ ಪ್ರೀಮಿಯರ್ ಶೋ ಉದ್ಘಾಟನ ಸಮಾರಂಭ

ಮಣಿಪಾಲ್ ಭಾರತ್ ಮಾಲ್ ನಲ್ಲಿ ಗಬ್ಬರ್ ಸಿಂಗ್ ತುಳು ಫಿಲಂ ನ ಪ್ರೀಮಿಯರ್ ಶೋ ತಾರೀಕು 28.02.20 24 ರಂದು ಸಂಜೆ 6.30 ಕ್ಕೆ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ರವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ತುಳುಕೂಟದ ಅಧ್ಯಕ್ಷರಾದ ಜಯಕರ ಶೆಟ್ಟಿ ,ಉದ್ಯಮಿ ಅಬೂಬಕ್ಕರ್, ವೀಣಾ ಶೆಟ್ಟಿ , ಬೈಕಾಡಿ ಸುಪ್ರಸಾದ್ ಶಕ್ತಿ ಬಿರ್ತಿ ರಾಜೇಶ್ ಶೆಟ್ಟಿ, ಬಿಲ್ಡರ್ ದಿನೇಶ್ ಪೂಜಾರಿ ಸಂತ ಕಟ್ಟೆ ರಾಘವೇಂದ್ರ ಜೆ.ಬಿ. ಬ್ರಹ್ಮಾವರ , ಶೇಖರ್ ಹಾವಂಜೆ, ಎಸ್.ನಾರಯಣ ಬ್ರಹ್ಮಾವರ, ನಾಯಕ ಶರಣ್ ಶೆಟ್ಟಿ ಹಾಗೂ ಸ್ಥಳೀಯ ಕಲಾವಿದರಾದ ಚಂದ್ರಹಾಸ್ ಶೆಟ್ಟಿ ಕಪ್ಪೆಟ್ಟು , ಪೂರ್ಣಿಮಾ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾ ವೀಕ್ಷಕ ರಾದ ಫ್ರಾಂಕಿ ಡಿಸೋಜ ಕೊಳಲಗಿರಿ, ತುಳುನಾಡು ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಹಾವಂಜೆ ,ಪ್ರಚಾರ ಸಂಯೋಜಕರಾದ ಜಾಹೀರ್ ಅಹಮ್ಮದ್ ಬೆಳಪು , ಕೀರ್ತಿರಾಜ್ ಅಂಬಲಪಾಡಿ, ನಿರ್ಮಾಪಕರು ಸತೀಶ್ ಶೆಟ್ಟಿ ಬಾರ್ಕೂರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದಯಾನಂದ ಕಿದಿಯೂರು ನೆರವೇರಿಸಿದರು.

ಸಿನಿಮಾ ವಿಭಿನ್ನ ರೀತಿಯ ಕಥೆಯನ್ನು ಹೊಂದಿದ್ದು 1961-62 ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಈ ಒಂದು ಸತ್ಯ ಕಥೆಯನ್ನು ಆಧರಿಸಿ ಸಿನಿಮ ರೀತಿಯಲ್ಲಿ ಚಿತ್ರಿಸಿ ನಿರ್ಮಾಣಗೊಂಡಿದೆ. ನವಿರಾದ ಹಾಸ್ಯ ,ಸಾಹಸ ದೃಶ್ಯಗಳು ,ಇಂಪಾದ ಸಂಗೀತ ಹಾಡುಗಳು ಒಳಗೊಂಡಿದ್ದು ಹಾಗೂ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಮೇಲಾಟ ಈ ಚಿತ್ರದ ಪ್ಲಸ್ ಪಾಯಿಂಟ್ ಮುಖ್ಯ ಕಲಾವಿದರಾಗಿ ನವೀನ್ ಡಿ.ಪಡೀಲ್, ಬೋಜರಾಜ್ ವಾಮಂಜೂರು,ಅರವಿಂದ ಬೋಳಾರ್, ಉಮೇಶ್ ಮಿಜಾರ್ , ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು ಚಂದ್ರಹಾಸ್ ಮಾಣಿ, ರವಿರಾಮ ಕುಂಜ ಗಿರೀಶ್ ಶೆಟ್ಟಿ ಕಟೀಲ್, ವೀಣಾ ಎಸ್ ಶೆಟ್ಟಿ, ಸಂದೀಪ್ ಭಕ್ತ ಹಾಗೆಯೇ ನಾಯಕನಾಗಿ ಶರಣ್ ಶೆಟ್ಟಿ ,ನಾಯಕಿಯಾಗಿ ವೆನಿಸಿತಾ ಡಾಯಸ್ , ಉಡುಪಿ ಹಾಗೂ ಮಂಗಳೂರಿನ ಹಲವಾರು ಕಲಾವಿದರು ಕಾಣಿಸಿಕೊಂಡಿದ್ದಾರೆ. ತುಳು ಸಿನಿಮಾಕ್ಕೆ ಹೊಸ ಮೆರಗು ಕೊಡುವ ರೀತಿಯಲ್ಲಿ ‘ಗಬ್ಬರ್ ಸಿಂಗ್” ತುಳು ಸಿನಿಮಾ ಮೂಡಿಬಂದಿದ್ದು ಮಸ್ಕತ್ ,ಕುವೈಟ್ ,ಬ್ಯಾಹರೈನ್ , ಕತಾರ್, ದುಬೈ ,ಯುಎಸ್ಎ ,ಸೌತ್ ಆಫ್ರಿಕಾ ,ಮುಂಬೈ ಬೆಂಗಳೂರು ಎಲ್ಲಾ ಕಡೆ ಬಿಡುಗಡೆ ಯಾಗಲಿರುವುದು ಕರಾವಳಿ ಭಾಗಕ್ಕೆ ಎಪ್ರಿಲ್ 12ನೇ ತಾರೀಕಿನಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರಾದ ಸತೀಶ್ ಪೂಜಾರಿ ಬಾರ್ಕೂರ್ ಈ ಸಂದರ್ಭದಲ್ಲಿ ತಮ್ಮ ಮಾತಿನಲ್ಲಿ ತಿಳಿಸಿದರು.

RELATED ARTICLES
- Advertisment -
Google search engine

Most Popular