Friday, March 21, 2025
Homeಮಂಗಳೂರುವಿಶ್ವದ ಟಾಪ್‌ 100 ಐಸ್‌ ಕ್ರೀಂಗಳ ಪಟ್ಟಿಯಲ್ಲಿ ಮಂಗಳೂರಿನ ಪಬ್ಬಾಸ್‌ ಐಡಿಯಲ್‌ ಐಸ್‌ ಕ್ರೀಂಗೆ ಸ್ಥಾನ!

ವಿಶ್ವದ ಟಾಪ್‌ 100 ಐಸ್‌ ಕ್ರೀಂಗಳ ಪಟ್ಟಿಯಲ್ಲಿ ಮಂಗಳೂರಿನ ಪಬ್ಬಾಸ್‌ ಐಡಿಯಲ್‌ ಐಸ್‌ ಕ್ರೀಂಗೆ ಸ್ಥಾನ!

ಮಂಗಳೂರು: ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಐಸ್‌ಕ್ರೀಂ ಅಂದರೆ ಪಂಚಪ್ರಾಣ. ಪ್ರತಿಯೊಬ್ಬರೂ ಐಸ್‌ ಕ್ರೀಂ ಸಿಕ್ಕಿದರೆ ಸವಿಯದಿರಲಾರರು. ಹೀಗಾಗಿ ಜಗತ್ತಿನಾದ್ಯಂತ ಸಾವಿರಾರು ಐಸ್‌ಕ್ರೀಂ ಬ್ರಾಂಡ್‌ಗಳಿವೆ. ಅವುಗಳಲ್ಲಿ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಂಗಳ ಪಟ್ಟಿಯಲ್ಲಿ ನಮ್ಮ ಮಂಗಳೂರಿನ ಐಡಿಯಲ್‌ ಪಬ್ಬಾಸ್‌ನ ಗಡ್‌ಬಡ್‌ ಐಸ್‌ಕ್ರೀಂ ಸ್ಥಾನ ಪಡೆದಿದೆ. ಐಡಿಯಲ್‌ ಪಬ್ಬಾಸ್‌ನ ಐಸ್‌ಕ್ರೀಂ ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಂಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ತುಳುವರಿಗೆ ಹೆಮ್ಮೆಯ ವಿಷಯ.
ಮಂಗಳೂರಿನ ಪಬ್ಬಾಸ್‌ ಜೊತೆಗೆ ಕರ್ನಾಟಕದ ಬೆಂಗಳೂರಿನ ಡೈತ್‌ ಬೈ ಚಾಕೊಲೇಟ್‌ ಐಸ್‌ಕ್ರೀಂ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಆನ್‌ಲೈನ್‌ ಟ್ರಾವೆಲ್‌ ಮತ್ತು ಫುಡ್‌ಗೈಡ್‌ ʻಟೇಸ್ಟ್‌ ಅಟ್ಲಾಸ್‌ʼ ವಿಶ್ವದ ಟಾಪ್‌ 100 ಐಕಾನಿಕ್‌ ಐಸ್‌ಕ್ರೀಂಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್‌ 100 ಐಸ್‌ ಕ್ರೀಂಗಳ ಪಟ್ಟಿಯಲ್ಲಿ ಭಾರತದ ಒಟ್ಟು ಐದು ಐಸ್‌ ಕ್ರೀಂಗಳು ಸ್ಥಾನ ಪಡೆದಿವೆ.

RELATED ARTICLES
- Advertisment -
Google search engine

Most Popular