ಗಡುಪಾಡು ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ನೇಮೋತ್ಸವ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು.
ದಿನಾಂಕ 08-04-2024 ರಂದು ಬೆಳ್ಳಿಗೆ ಗಂಟೆ 9-00 ಕ್ಕೆ ಗಡುಪಾಡು ಸ್ಥಳದಲ್ಲಿ ಗಣಹೋಮ ನಂತರ ಶ್ರೀ ಸತ್ಯನಾರಾಯಣ ಪೂಜೆ ರಾತ್ರಿ 8-00 ಕ್ಕೆ ಭಜರಂಗಿ ವ್ಯಾಯಾಮ ಶಾಲೆ ಕುಕ್ಕಿಕಟ್ಟೆ ಇವರಿಂದ ತಾಲೀಮು ಪ್ರದರ್ಶನ, ರಾತ್ರಿ 8-30 ರಿಂದ ಅನ್ನ ಸಂತರ್ಪಣೆ ಹಾಗೂ ಗಂಟೆಗೆ 9-00 ಕ್ಕೆ ಸರಿಯಾಗಿ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ನೇಮೋತ್ಸವವು ನಡೆಯಲಿದೆ. ಈ ದೈವ ದೇವರ ಸೇವೆಯಲ್ಲಿ ಭಾಗವಹಿಸಿ ಪ್ರಸಾದವನ್ನು ಪಡೆಯುವಂತೆ ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ ಗೊಳಿಚಾವಡಿ ಕುಕ್ಕಿಕಟ್ಟೆ 9 ನೇ ಬ್ಲಾಕ್ ಕೃಷ್ಣಾಪುರ ಇದರ ಪದಾಧಿಕಾರಿಗಳು ವಿನಂತಿಸಿರುತ್ತಾರೆ. ಆಮಂತ್ರಣ ಬಿಡುಗಡೆ ಸಮಾರಂಭದಲ್ಲಿ ಸ್ಥಳೀಯ ಉದ್ಯಮಿಗಳಾದ ಸತೀಶ್ ಮುಂಚೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮಾನಾಥ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಮಧ್ಯ, ಮಾಜಿ ಕಾರ್ಪೊರೇಟರ್ ಪ್ರಶಾಂತ್ ಮುಡಾಯಿಕೊಡಿ, ಶ್ರೀ ಭಗವಾನ್ ಮಧ್ಯ , ಗಣೇಶ್ ಶೆಟ್ಟಿ ಸ್ಥಳೀಯ ಪ್ರಮುಖರಾದ ಭವಾನಿ ಶಂಕರ, ಕೇಶವ್, ಚೇತನ್ ಹಾಗೂ ಭಕ್ತರು ಉಪಸ್ಥಿತರಿದ್ದರು.