ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊದಲದಲ್ಲಿ 30ನೇ ವರ್ಷದ ಶ್ರೀ ಗಣೇಶೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಬಹು ಮುಖ್ಯವಾಗಿ ಜಟಾಯು ಮೇಲೆ ಗಣಪತಿಯನ್ನು ಕುರಿಸುದರ ಮೂಲಕ ಜಿಲ್ಲೆಯಾದ್ಯಂತ ಪ್ರಶಂಸೆಯನ್ನು ಪಡೆಯುದರ ಮೂಲಕ ಅತ್ಯಂತ ಜನಮನ್ನಣೆ ಪಡೆದಿದೆ.

ಪ್ರತಿ ವರ್ಷವೂ ಒಂದೊಂದು ವಿಶೇಷ ರೀತಿಯಲ್ಲಿ ಗಣಪತಿ ಮಂಟಪ ತಯಾರಿಯಲ್ಲಿ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿರುವ ಉಪೇಂದ್ರ ಆಚಾರ್ಯ ಹೊದಲ ಇವರು ಸತತ 15 ದಿನಗಳಿಂದ ಮರ, ಕಬ್ಬಿಣ ಹಾಗೂ ತರ್ಮಕೋಲ್ ಬಳಸಿ ಎಲ್ಲಾ ಕೆಲಸವನ್ನು ಸತಿ ಪತಿಯರು ಇಬ್ಬರೆ ಮಾಡುವುದರ ಮೂಲಕ ರಕ್ಕೆಯನ್ನು ಬಡಿಯುವ ಜಟಾಯು ತಯಾರಿ ಮಾಡಿರುವುದು ಒಂದು ಪ್ರಮುಖ ಆಕರ್ಷಣೆಯಾಗಿದೆ.
ವರದಿ :- ಅರುಣ ಕುಂದ