ಜಕ್ರಿಬೆಟ್ಟು: ೨೧ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ
ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ ೨೧ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಬಂಟ್ವಾಳದ ಹಬ್ಬವಾಗಿ ಎಲ್ಲಾ ಜಾತಿ-ಧರ್ಮಗಳ ಭಕ್ತರು ಒಟ್ಟಾಗಿ ಸೌಹಾರ್ದತೆಯಿಂದ ಬೆಸೆಯುವ ಸಾರ್ವಜನಿಕ ಗಣೇಶೋತ್ಸವವು ಸಮಾಜವನ್ನು ಒಗ್ಗೂಡಿಸುತ್ತಿದೆ ಎಂದು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಇಲ್ಲಿನ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶನಿವಾರ ಆರಂಭಗೊಂಡ ೨೧ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯ ವೈದ್ಯ ಡಾ.ಶಿವಪ್ರಸಾದ್ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬೂಡ ಅಧ್ಯಕ್ಷ ಬೇಬಿ ಕುಂದರ್, ಪುರಸಭೆ ಅಧ್ಯಕ್ಷ ವಾಸು ಪೂಜಾರಿ ಶುಭ ಹಾರೈಸಿದರು.
ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಜನಾರ್ದನ ಚೆಂಡ್ತಿಮಾರ್, ಸುದೀಪ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆರ್.ಅಂಚನ್, ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಅಬ್ಬಾಸ್ ಆಲಿ, ಸುಧಾಕರ ಶೆಣೈ ಖಂಡಿಗ ಮತ್ತಿತರರು ಭಾಗವಹಿಸಿದ್ದರು. ರಾಜೀವ ಶೆಟ್ಟಿ ಎಡ್ತೂರು ಸ್ವಾಗತಿಸಿ, ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಭಜನಾ ಸಂಕೀರ್ತನೆ, ಯಕ್ಷಗಾನ ತಾಳಮದ್ದಳೆ, ನೃತ್ಯೋಲ್ಲಾಸ, ನೃತ್ಯ-ಗಾಯನ ಸಂಭ್ರಮ ಕಾರ್ಯಕ್ರಮ ನಡೆಯಿತು.

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ೪೫ನೇ ವರ್ಷ ಪೂಜಿಸಲಾದ ಸಾರ್ವಜನಿಕ ಶ್ರೀ ಗಣೇಶನ ವಿಗ್ರಹ.



ಜಗತ್ತಿನ ವಿವಿಧೆಡೆ ಗಣಪತಿ ದೇವರ ಆರಾಧನೆ ನಡೆಯುವ ಮೂಲಕ ಸಾಮರಸ್ಯ ಮತ್ತು ಪ್ರಕೃತಿ ಆರಾಧನೆಯ ಮಹತ್ವ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಇಲ್ಲಿನ ರಾಯಿ ಪೇಟೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಭಾನುವಾರ ನಡೆದ ೧೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ೧೩ ಮಂದಿ ಭಕ್ತರಿಗೆ ಹಣ್ಣಿನ ಗಿಡ ವಿತರಿಸಲಾಯಿತು.
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ಧಕಟ್ಟೆ, ಮುಖ್ಯಶಿಕ್ಷಕಿ ಸುಜಾತ ರಾಯಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಉದ್ಯಮಿ ರಂಜನ್ ಕುಮಾರ್ ಶೆಟ್ಟಿ ಅರಳ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಪ್ರಧಾನ ಕಾರ್ಯದರ್ಶಿ ಸಚ್ಚಿದಾನಂದ ಕೊಯಿಲ, ಪ್ರಮುಖರಾದ ಕೆ.ರಮೇಶ ನಾಯಕ ರಾಯಿ, ಟಿ.ಅನಿಲ್ ಕುಮಾರ್ ಪ್ರಭು, ಸುಧೀರ್ ಶೆಟ್ಟಿ ರಾಯಿ, ಪ್ರಕಾಶ್ ಕುಮಾರ್ ಜೈನ್, ರಾಮಸುಂದರ ಗೌಡ, ಸೋಮಪ್ಪ ಮಡಿವಾಳ, ಮೋಹನ ಗೌಡ ಕಲ್ಮಂಜ, ಸೋಮಶೇಖರ ರೈ, ನಾರಾಯಣ ಗೌಡ ಮೀಯಾಲು, ಸತೀಶ್ ಕುಮಾರ್ ಕೊಯಿಲ, ಯಶೋಧರ ರೈ ದೇರಾಜೆ, ಜಯಲಕ್ಷ್ಮಿ ಮಾಬೆಟ್ಟು, ರಾಘವೇಂದ್ರ ಪೂಜಾರಿ ರಾಯಿ, ಕೊರಗಪ್ಪ ಪೂಜಾರಿ, ಮೋಹನ ರಾಯಿ, ರುಕ್ಕಯ ಬಂಗೇರ, ಪರಮೇಶ್ವರ ಪೂಜಾರಿ ಮತ್ತಿತರರು ಇದ್ದರು.
ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ ಸ್ವಾಗತಿಸಿ, ಉಪಾಧ್ಯಕ್ಷ ಸದಾನಂದ ಸೀತಾಳ ವಂದಿಸಿದರು. ಸಮಿತಿ ಸಂಚಾಲಕ ಜಗದೀಶ ಕೊಯಿಲ ಮತ್ತು ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ಬೈದಗುತ್ತು ಕಾರ್ಯಕ್ರಮ ನಿರೂಪಿಸಿದರು.

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಹಿಂದೂ ಹಿತರಕ್ಷಣಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶನಿವಾರ ನಡೆದ ಮಹಿಳಾ ಧಾರ್ಮಿಕ ಸಭೆಯಲ್ಲಿ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಭೌಧಿಕ್ ನೀಡಿದರು. ಮುಖ್ಯಶಿಕ್ಷಕಿ ಪೂರ್ಣಿಮಾ ಜೈನ್ ಕಲ್ಮಂಜ, ಅಂಚೆ ಅಧಿಕಾರಿ ರಾಜೇಶ್ವರಿ ಸಿದ್ಧಕಟ್ಟೆ, ಪ್ರಾಧ್ಯಾಪಕಿ ವಿಜಯಲಕ್ಷ್ಮಿ ನಾಯಕ್, ಯೋಜನಾಧಿಕಾರಿ ಮಲ್ಲಿಕಾ ಧಾರವಾಡ ಮತ್ತಿತರರು ಇದ್ದರು.

ಬಂಟ್ವಾಳ ತಾಲ್ಲೂಕಿನ ರಾಯಿ ಪೇಟೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶನಿವಾರ ನಡೆದ ೧೩ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು.

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಹಿಂದೂ ಹಿತರಕ್ಷಣಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ೩೭ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಗುಣಶ್ರೀ ವಿದ್ಯಾಲಯ ವಿದ್ಯಾರ್ಥಿಗಳ ತಂಡ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು.

ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಚೌತಿ ಉತ್ಸವ ಪ್ರಯುಕ್ತ ಭಜನಾ ಮಂಡಳಿ ವತಿಯಿಂದ ೧೦೮ ಕಾಯಿ ಸಾಮೂಹಿಕ ಗಣಯಾಗ ಶನಿವಾರ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಭಜನಾ ಮಂಡಳಿ ಅಧ್ಯಕ್ಷ ರಾಜೇಶ ಶಿವನಗರ, ಅರ್ಚಕ ಡಿ.ರಾಮಚಂದ್ರ ಭಟ್, ದಿನೇಶ ಭಟ್ ಮತ್ತಿತರರು ಇದ್ದರು.