ದಾವಣಗೆರೆ:ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆಯ ಆಶ್ರಯದಲ್ಲಿ ಜನವರಿ ೨೬ ರಂದು ನಡೆಯುವ ಸಮಾರಂಭದಲ್ಲಿ ದಾವಣಗೆರೆಯ ಬಹುಮುಖ ಪ್ರತಿಭೆ ವಿವಿಧ ಸಂಘಟನೆಗಳ ನಿರಂತರ ಕಠಿಣ ಪರಿಶ್ರಮದ ೪ ದಶಕಗಳ ಕಾಲ ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಗಳ ಕಾಳಜಿಯ ಸಾಧನೆಯನ್ನು ಗುರುತಿಸಿ ಸಾಲಿಗ್ರಾಮ ಗಣೇಶ್ ಶೆಣೈಯವರನ್ನು “ಜ್ಞಾನ ವಿಭೂಷಣ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಪ್ರೊ|| ಎಲ್.ಹೆಚ್.ಪೆಂಡಾರಿ ತಿಳಿಸಿದ್ದಾರೆ.
ನಿರಂತರವಾಗಿ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸುತ್ತಿರುವ ಶೆಣೈಯವರಿಗೆ ಕಲಾಕುಂಚ, ಯಕ್ಷರಂಗ ಸೇರಿದಂತೆ ವಿವಿಧ ಸಂಘಟನೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.