Wednesday, February 19, 2025
HomeUncategorizedಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಉತ್ಸವ ಸಂಭ್ರಮ

ಬೈಂದೂರು ತಾಲೂಕಿನ ಪ್ರಸಿದ್ಧ ಶ್ರೀ ಅಗಸ್ತೇಶ್ವರ ಶ್ರೀ ಮಹಾಗಣಪತಿ ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನ ಕಿರಿಮಂಜೇಶ್ವರದಲ್ಲಿ ಶ್ರೀ ಗಣೇಶ ಚತುರ್ಥಿ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ಶನಿವಾರ ನಡೆಯಿತು.

ಶ್ರೀ ಗಣೇಶ ಚತುರ್ಥಿ ಉತ್ಸವದ ಅಂಗವಾಗಿ ಶ್ರೀ ಮಹಾಗಣಪತಿ ದೇವರಿಗೆ 108 ಕಾಯಿ ಗಣಹವನ,ಸಹಸ್ರ ದೂರ್ವಾರ್ಚನೆ,ರಂಗಪೂಜೆ,ಅಲಂಕಾರ ಪೂಜೆ,ಮೋದಕ ನೈವೇದ್ಯ ಸೇವೆ ಹಣ್ಣುಕಾಯಿ ಮತ್ತು ಮಂಗಳಾರತಿ ಸೇವೆ.ಮಹಾಮಂಗಳಾರತಿ ಸೇವೆ ಹಾಗೂ ಕಡುಬು ಸೇವೆ ಮತ್ತು ಅನ್ನದಾನ ಸೇವೆಯನ್ನು ಸಮರ್ಪಿಸಲಾಯಿತು.ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಶ್ರೀದೇವರ ಪ್ರಸಾದವನ್ನು ಸ್ವೀಕರಿಸಿದರು.

ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಮಾತನಾಡಿ,ವಿಘ್ನ ನಿವಾರಕನ ಆರಾಧನೆಯನ್ನು ಭಕ್ತಿಯಿಂದ ಜನರು ಆಚರಿಸುತ್ತಿದ್ದು ಶ್ರೀ ಮಹಾಗಣಪತಿ ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.

ಅನ್ನದಾನ ಸೇವಾ ಕರ್ತರಾದ ಸತೀಶ ಕೊಠಾರಿ ಮಾತನಾಡಿ, ಸಮುದ್ರ ತೀರದಲ್ಲಿ ನೆಲೆಸಿರುವ ಇವೊಂದು ದೇವಾಲಯವು ಚರಿತ್ರೆಯಲ್ಲಿ ಅದ್ಭುತತೆಯನ್ನು ಪಡೆದುಕೊಂಡಿದೆ. ಶ್ರೀ ದೇವರು ಕೊಟ್ಟಂತಹ ಒಂದು ಸುವರ್ಣ ಅವಕಾಶದಿಂದ ಕೈಲಾದ ಮಟ್ಟಿಗೆ ದೇವರ ಸೇವೆಯನ್ನು ಮಾಡುತ್ತಿದ್ದೇನೆ. ಅನ್ನದಾನ ಸೇವೆ ಎನ್ನುವುದು ನನಗೆ ಬಹಳಷ್ಟು ಖುಷಿ ಕೊಡುವಂತಹ ಸಂಗತಿ ಎಂದು ಹೇಳಿದರು.

ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ ಕಿರಿಮಂಜೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಐತಾಳ್ ಮಾತನಾಡಿ,ದೇವಾಲಯದಲ್ಲಿ ಚೌತಿ ಉತ್ಸವವನ್ನು ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಧಿವತ್ತನಾಗಿ ನಡೆಸಿಕೊಂಡು ಬರಲಾಗುತ್ತಿದ್ದು.ಅನ್ನದಾನ ಸೇವೆ ಸಹಿತ ಭಜನೆ ಸೇವೆ,ನಾರಿಕೇಳ ಗಣಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ದೇವಸ್ಥಾನದ ಅರ್ಚಕರಾದ ರಾಮಕೃಷ್ಣ ಭಟ್ ದೇವಳದ ಇತಿಹಾಸದ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು, ಊರಿನ ಗ್ರಾಮಸ್ಥರು,ಭಕ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular