ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಅತ್ತೂರು, ದೂಪದಕಟ್ಟೆ, ನಿಟ್ಟೆ ವತಿಯಿಂದ ಸೆ.7ರಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಲಿದೆ. ಸೆ.9ರ ಶನಿವಾರ ಬೆಳಿಗ್ಗೆ 7.20ಕ್ಕೆ ವಿಗ್ರಹ ಪ್ರತಿಷ್ಠೆ, ಬೆಳಿಗ್ಗೆ 7.30ರಿಂದ 11.30ರವರೆಗೆ ಭಜನೆ ನಡೆಯಲಿದೆ. 12.30ಕ್ಕೆ ಮಹಾಪೂಜೆ ನಡೆಯಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 2ರಿಂದ ಮದಿಮೆದ ಇಲ್ಲಡೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಸಂಜೆ 5ರಿಂದ ವಿಸರ್ಜನೆ ಮೆರವಣಿಗೆ ಆರಂಭವಾಗಲಿದ್ದು, 8.30ಕ್ಕೆ ಜಲಸ್ತಂಭನ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕರು ಹೇಳಿದ್ದಾರೆ. ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆಯೂ ಇರಲಿದೆ.