Thursday, December 5, 2024
HomeUncategorizedನೊಂದ ಗ್ಯಾರೇಜು ಸದಸ್ಯನಿಗೆ ಆಸರೆಯಾದ ಗ್ಯಾರೇಜ್ ಮಾಲಕರ ಸಂಘ(ರಿ )ಬಂಟ್ವಾಳ ವಲಯ

ನೊಂದ ಗ್ಯಾರೇಜು ಸದಸ್ಯನಿಗೆ ಆಸರೆಯಾದ ಗ್ಯಾರೇಜ್ ಮಾಲಕರ ಸಂಘ(ರಿ )ಬಂಟ್ವಾಳ ವಲಯ


ಬಂಟ್ವಾಳ, ಡಿ, 3 : ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ಇದರ ವತಿಯಿಂದ ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದ ಸಂಘದ ಸಕ್ರಿಯ ಸದಸ್ಯರಾದ ದಿನೇಶ್ ಕುಲಾಲ್ ರವರಿಗೆ
ಮಾನವೀಯ ನೆಲೆಯಲ್ಲಿ ,ಸಂಘದ ಸದಸ್ಯರೆಲ್ಲರೂ ಜೊತೆಗೂಡಿ ತುರ್ತು ಚಿಕಿತ್ಸೆಗಾಗಿ
ಸುಮಾರು(1,01,500-00) ಒಂದು ಲಕ್ಷದ ಒಂದು ಸಾವಿರದ ಐನೂರು ರೂಪಾಯಿಗಳ ಸಹಾಯಧನವನ್ನು ಆಟೋ ಲೈನ್ಸ್ ನಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ದಿನೇಶ್ ಕುಲಾಲ್ ರವರ ಧರ್ಮಪತ್ನಿಗೆ ನೀಡಲಾಯಿತು,
ಅಧ್ಯಕ್ಷರಾದ ಸುಧೀರ್ ಪೂಜಾರಿ ರವರು ಮಾತನಾಡಿ
ಸಂಘದ ಸದಸ್ಯರ ಕಷ್ಟಗಳಿಗೆ ಸ್ಪಂದಿಸುವುದು ಮಾನವ ಧರ್ಮ ಇದನ್ನು ಪಾಲಿಸಿಕೊಂಡು ಬಂದಿರುವುದು ನಮ್ಮ ಸಂಘದ ಹೆಮ್ಮೆ ಎಂದು ತಿಳಿಸಿದರು ,
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಲಾಲ್,ಕೋಶಾಧಿಕಾರಿ ಭಾಸ್ಕರ್ ಕುಲಾಲ್, ಮಾಜಿ ಅಧ್ಯಕ್ಷರಾದ ಜಗದೀಶ್ ರೈ, ಉಪಾಧ್ಯಕ್ಷರಾದ ಜನಾರ್ಧನ್ ಕುಲಾಲ್, ಪ್ರಸಾದ್ ಬಂಗೇರ ಜೊತೆ ಕಾರ್ಯದರ್ಶಿ ರಮೇಶ್ ಸಾಲಿಯನ್ ಗೌರವ ಸಲಹೆಗಾರದ ಸುಧಾಕರ್ ಸಾಲ್ಯಾನ್ ,ವಿಶ್ವನಾಥ ಬಿ , ಅಣ್ಣು ಪೂಜಾರಿ ಸಂಘಟನಾ ಸಂಚಾಲಕರಾದ ಗಣೇಶ್ ಸುವರ್ಣ, ಪ್ರಶಾಂತ್ ಭಂಡಾರ್ಕರ್, ರಮೇಶ್ ಭಂಡಾರಿ ರಮೇಶ್ ಪೂಜಾರಿ ಸಂಘಟನಾ ಕಾರ್ಯದರ್ಶಿಯಾದ ನವೀನ್ ಕುಲಾಲ್ ,ರಾಜೇಂದ್ರ ಮಾಣಿ ಕ್ರೀಡಾ ಕಾರ್ಯದರ್ಶಿಗಳಾದ ಯೋಗೀಶ್ ರಾಮಕುಲಾಲ್ ,ಸೋಮನಾಥ ಸಾಲ್ಯಾನ್,ಗಣೇಶ್ ಕುಲಾಲ್ ಸದಸ್ಯತ್ವ ಅಭಿವೃದ್ಧಿ ಸಂಚಾಲಕರಾದ ಲಕ್ಷ್ಮಣ್ ಕುಲಾಲ್ ಹಾಗು ಸಂಘದ ಸದಸ್ಯರು ಉಪಸ್ತಿತರಿದ್ದರು.

RELATED ARTICLES
- Advertisment -
Google search engine

Most Popular