ನವರಾತ್ರಿ ಹಬ್ಬಗಳ ಸಂದರ್ಭ ಗರ್ಬಾ ಡಾನ್ಸ್ ಹೆಚ್ಚು ಜನಪ್ರಿಯವಾದುದು. ಅದರಲ್ಲೂ ಉತ್ತರ ಭಾರತದಲ್ಲಿ ಈ ನೃತ್ಯಕ್ಕೆ ತುಂಬಾ ಬೇಡಿಕೆ ಇದೆ. ಪುಣೆಯ ʻಗರ್ಬಾ ಕಿಂಗ್ʼ ಎಂದೇ ಪ್ರಸಿದ್ಧರಾಗಿರುವ ನಟ ಅಶೋಕ್ ಮಾಲಿ ಎಂಬವರು ನೃತ್ಯ ಮಾಡುತ್ತಿರುವಾಗಲೇ ಕುಸಿದುಬಿದ್ದು, ಹೃದಯಾಘಾತಕ್ಕೆ ಬಲಿಯಾದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ.
ನವರಾತ್ರಿ ಉತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಅಶೋಕ್ ಮಾಲಿ ಹೃದಯಾಘಾತದಿಂದ ಕುಸಿದು ಬೀಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
ದಸರಾ ಸಮಯದಲ್ಲಿ ಧುಲೆ ಜಿಲ್ಲೆಯ ಶಿಂಧಖೇಡಾ ತಾಲೂಕಿನ ಹೋಲ್ ಗ್ರಾಮದಲ್ಲಿ ನವರಾತ್ರಿ ಉತ್ಸವ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಶೋಕ್ ಮಾಲಿ ಭಾಗವಹಿಸಿದ್ದು, ಪ್ರದರ್ಶನ ನೀಡಲು ಆಗಮಿಸಿದ್ದರು. ಅಶೋಕ್ ಅವರ ಗರ್ಬಾ ನೃತ್ಯ ಕಾಣಲು ಅನೇಕ ಜನರು ನೆರೆದಿದ್ದರು.
ಪ್ರದರ್ಶನದ ವೇಳೆ ಅಶೋಕ್ಗೆ ಹೃದಯಾಘಾತವಾಗಿದೆ. ನೃತ್ಯ ಮಾಡುತ್ತಿರುವಾಗಲೇ ಅಶೋಕ್ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಅಶೋಕ್ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…