Saturday, July 20, 2024
Homeಅಪಘಾತಸಿಲಿಂಡರ್ ಗ್ಯಾಸ್ ಸೋರಿಕೆ: ಒಂದೇ ಕುಟುಂಬದ ನಾಲ್ವರು ಸಾವು

ಸಿಲಿಂಡರ್ ಗ್ಯಾಸ್ ಸೋರಿಕೆ: ಒಂದೇ ಕುಟುಂಬದ ನಾಲ್ವರು ಸಾವು

ಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟಗಳಿಂದ ಸಾವಿಗೀಡಾದ ಸಾಕಷ್ಟು ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಯರಗನಹಳ್ಳಿಯ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಮನೆಯೊಳಗೆ ಮಲಗಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕುಮಾರಸ್ವಾಮಿ (45), ಅವರ ಪತ್ನಿ ಮಂಜುಳಾ (39) ಹಾಗೂ ಇವರ ಮಕ್ಕಳಾದ ಅರ್ಚನಾ (19) ಮತ್ತು ಸ್ವಾತಿ (17) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಕುಮಾರಸ್ವಾಮಿ ದಂಪತಿ ಮನೆಯಲ್ಲಿ ಬಟ್ಟೆ ಐರನ್ ಮಾಡುವ ಕೆಲಸ ಮಾಡುತ್ತಿದ್ದರು. ಈ ಕಾರಣಕ್ಕಾಗಿ ಮೂರು ಸಿಲಿಂಡರ್ ಇಟ್ಟುಕೊಂಡಿದ್ದರು. ಅದರಲ್ಲಿ ಒಂದು ಸಿಲಿಂಡರ್ ಸೋರಿಕೆಯಾಗಿ ಈ ಸಾವುಗಳು ಸಂಭವಿಸಿವೆ ಎನ್ನಲಾಗುತ್ತಿದೆ.

ಮೃತ ಕುಮಾರಸ್ವಾಮಿ ಮೂಲತಃ ಕಡೂರು ತಾಲೂಕಿನ ಸಖರಾಯಪಟ್ಟಣದವರು. ಅಲ್ಲಿಯೆ ಸೋಮವಾರ ಇದ್ದ ಸಂಬಂಧಿಗಳ ಮದುವೆಗೆ ಕುಟುಂಬ ಸಮೇತರಾಗಿ ಹೋಗಿ ಸೋಮವಾರ ರಾತ್ರಿ ಹಿಂದಿರುಗಿದ್ದರು. ಮಂಗಳವಾರ ಮುಂಜಾನೆ ಹೊತ್ತಿಗೆ ಇವರೆಲ್ಲಾ ಹೆಣವಾಗಿದ್ದರು.

10*20 ಸೈಜಿನ ಈ ಮನೆಯಲ್ಲಿ ಗಾಳಿ ಅಡ್ಡಾಡಲು ಯಾವುದೇ ಸರಿಯಾದ ವ್ಯವಸ್ಥೆ ಇಲ್ಲ. ಇಂತಹ ಸ್ಥಿತಿಯಲ್ಲಿ ಗ್ಯಾಸ್ ಲಿಕ್ ಆಗಿದೆ. ಲಿಕ್ ಆದ ಗ್ಯಾಸ್  ಸೇವಿಸಿದ ಪರಿಣಾಮ ಈ ಸಾವುಗಳು ಉಂಟಾಗಿವೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

RELATED ARTICLES
- Advertisment -
Google search engine

Most Popular