ದಾವಣಗೆರೆ: ಪ್ರಸ್ತುತ ದಿನಮಾನಗಳಲ್ಲಿ ನವಪೀಳಿಗೆಗಳಿಗೆ ತಮ್ಮ ಕುಟುಂಬದ ಹಿನ್ನೆಲೆ ಏನೆಂಬುದು ಕಾಳಜಿ ಇಲ್ಲದಿರುವುದು ಸರ್ವೆ ಸಾಮಾನ್ಯ. ದಾವಣಗೆರೆಯ ನಲ್ಲೂರು ಲಕ್ಷ್ಮ ಣ್‌ರಾವ್‌ರವರು ತಮ್ಮ ವಂಶದ ಕಾಳಜಿಯೊಂದಿಗೆ ಸುಮಾರು ೪ ತಲೆಮಾರಿನ ವಂಶವೃಕ್ಷದ ಹೊತ್ತಿಗೆ ಮುಂದಿನ ತಲೆಮಾರಿಗೆ ಒಂದೊಳ್ಳೆಯ ಮಾರ್ಗದರ್ಶನದ ಕಾಯಕ ಶ್ಲಾಘನೀಯ. ವ್ಯಾಪಾರ, ವ್ಯವಹಾರ ತಪ್ಪಲ್ಲ ಜತೆಯಲ್ಲಿ ನಮ್ಮ ನಿಮ್ಮೆಲ್ಲರ ಜೀವನದ ಮಾನವೀಯ ಮೌಲ್ಯವೇ ವಂಶಾವಳಿಯ ಕೃತಿ ಎಂದು ದಾವಣಗೆರೆ ಜಿಲ್ಲೆಯ ಅವರಗೊಳ್ಳದ ಶ್ರೀಕ್ಷೇತ್ರ ಪುರವರ್ಗ ಹಿರೇಮಠದ ಪರಮಪೂಜ್ಯ ಶ್ರೀ ಷ.ಬ್ರ. ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳರವರು ಆಶೀವರ್ಚನದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ದಾವಣಗೆರೆಯ ವಿನೋಬನಗರದ ೧ನೇ ಮುಖ್ಯರಸ್ತೆಯಲ್ಲಿರುವ ಗೌರಮ್ಮ ನರಹರಿ ಶೇಟ್ ಸಭಾಂಗಣದಲ್ಲಿ ನಿನ್ನೆ ನಡೆದ ನಲ್ಲೂರು ಲಕ್ಷ್ಮಣ್‌ರಾವ್‌ರವರ ಎಪ್ಪತ್ತನೇ ವರ್ಷದ ಹುಟ್ಟುಹಬ್ಬ ಹಾಗೂ ಶ್ರೀ ಭೀಮರಥ ಶಾಂತಿಯ ಸಮಾರಂಭದಲ್ಲಿ ನಲ್ಲೂರು ಲಕ್ಷö್ಮಣ್‌ರಾವ್‌ರವರ ಕೃತಿ “ಸಾಂಸ್ಕೃತಿಕ ಸೌರಭ” ಕಿರು ಹೊತ್ತಿಗೆ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಪರಮಪೂಜ್ಯರು ಮಾತನಾಡಿದರು.
ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಈ ಸಮಾರಂಭದಲ್ಲಿ ಈ ಕಿರು ಹೊತ್ತಿಗೆ ಲೋಕಾರ್ಪಣೆಯನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪನವರು ಮಾತನಾಡಿ, ಬರವಣಿಗೆ, ಸಾಹಿತ್ಯ, ಸಂಸ್ಕೃತಿ ನಮ್ಮ ನಿಮ್ಲೆಲ್ಲರ ಜೀವವಕ್ಕೆ ಸ್ಪೂರ್ತಿ, ನಲ್ಲೂರು ಲಕ್ಷ್ಮಣ್‌ರಾವ್‌ರವರು ಕಳೆದ 5 ದಶಕಗಳಿಂದ ವ್ಯವಹಾರದ ಜತೆಯಲ್ಲಿ ಕಲೆ, ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ ಸಮಾಜ ಸೇವೆಗಳಲ್ಲಿ ನಿರಂತರ ಕಠಿಣ ಪರಿಶ್ರಮದಿಂದ ಕಾಯಕ ಮಾಡುತ್ತಿರುವುದು ಇತರರಿಗೆ ಮಾದರಿ ಎಂದು ತಮ್ಮ ಮಾತು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ಮಾತನಾಡಿ, ಶುಭ ಕೋರಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಗಲಕೋಟೆಯ ಹಿರಿಯ ಸಾಹಿತಿ ಡಾ|| ಹೆಚ್.ಎಫ್. ಯೋಗಪ್ಪನವರು, ಕಿರು ಹೊತ್ತಿಗೆಯ ಸಂಪಾದಕರು, ಸಾಹಿತಿಗಳಾದ ಟಿ.ಎಸ್. ಶೈಲಜಾ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಥಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ, ಹಾವೇರಿ ಜಿಲ್ಲೆಯ ಹಿರೇಕೆರೂರಿನ ಉದ್ಯಮಿ ಸಮಾಜ ಸೇವಕರಾದ ದಯಾನಂದ ವೆಂಕಟೇಶ್ ಜನ್ನು, ಕೊಡುಗು ಜಿಲ್ಲೆ, ಮಡಿಕೇರಿಯ ಉದ್ಯಮಿ ಸಮಾಜ ಸೇವಕರಾದ ಬಿ.ಪಿ.ಸುಬ್ರಹ್ಮಣ್ಯ ಲೋಟಲೀಕರ್ ಮಾತನಾಡಿ, ನಲ್ಲೂರು ಲಕ್ಷ್ಮಣ್‌ರಾವ್‌ರವರ ಈ ಅದ್ದೂರಿಯ ಸುಸಂಪನ್ನಗೊಂಡ ಸಮಾರಂಭಕ್ಕೆ ಅವರ ಕುಟುಂಬದವರು ಕೈಜೋಡಿಸಿ ಸಹಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು.
ಕುಮಾರಿ ಸಂಜನಾ ಮಂಜುನಾಥ ಜನ್ನುರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭವನ್ನು ಅಚ್ಚುಕಟ್ಟಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ನಿರೂಪಿಸಿದರು. ಸುಪ್ರಿತಾ ಕಾರ್ತಿಕ್ ರೇವಣಕರ್‌ರವರು ಸ್ವಾಗತಿಸಿದರು. ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ನಲ್ಲೂರು ಲಕ್ಷ್ಮಣ್‌ರಾವ್‌ರವರಿಗೆ ಸನ್ಮಾನಿಸಿ, ಗೌರವಿಸಿದರು. ಕೊನೆಯಲ್ಲಿ ಶಿಲ್ಪಾ ಉಮೇಶ್‌ರವರು ವಂದಿಸಿದರು.