ಟ್ರಾನ್ಸ್ಪೋರ್ಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್‌ನ ಮಹಾಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ

0
59

ಮಂಗಳೂರು : ಟ್ರಾನ್ಸ್ಪೋರ್ಟ್ ಕಂಟ್ರಾಕ್ಟರ್ಸ್ ಮತ್ತು ಏಜೆಂಟರುಗಳ ಅಸೋಸಿಯೇಷನ್ (ರಿ) ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಿನಾಂಕ 27.09.26 ರಂದು ಎನ್.ಎಂ.ಪಿ.ಎ.ಬಿ.ಡಿ.ಸಿ. ಕನ್ವೆನ್ಷನ್ ಹಾಲ್, ಪಣಂಬೂರಿನಲ್ಲಿ ಬೆಳಿಗ್ಗೆ 10.30ಕ್ಕೆ ಜರಗಿತು.

ಕಾರ್ಯಕ್ರಮವನ್ನು ಬೈಕಂಪಾಡಿ ಮೊಗವೀರ ಮಹಾಸಭಾ ಇದರ ಅಧ್ಯಕ್ಷರಾದ ಕುಮಾರ್ ಮೆಂಡನ್ ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಅಸೋಸಿಯೇಷನ್ ನ ಅಧ್ಯಕ್ಷರಾದ ಚಿತ್ತರಂಜನ್ ರವರು ವಹಿಸಿದರು.

ಮುಖ್ಯ ಅತಿಥಿಗಳಾಗಿ ಎನ್. ಎಂ. ಪಿ. ಎ. ಹಿರಿಯ ಸಹಾಯಕ ಸಂಚಾರ ವ್ಯವಸ್ಥಾಪಕ ಅರುಣ್ ಕುಮಾರ್, ಜೆ. ಎಸ್.ಡಬ್ಲ್ಯೂ. ಹಿರಿಯ ಅಧಿಕಾರಿ ಸೂರಜ್ ಎಕ್ಕಾರ್, ತಣ್ಣೀರುಬಾವಿ ಮೊಗವೀರ ಮಹಾಸಭಾ ಇದರ ಅಧ್ಯಕ್ಷರಾದ ಲೀಲಾಧರ್ ಹಾಗೂ ಅಗರ್ವಾಲ್ ಕೋಲ್ ಕಾರ್ಪೊರೇಷನ್ ನ ಶಾಖಾ ವ್ಯವಸ್ಥಾಪಕ ವಿನಯ ಕುಮಾರ್ ಶುಕ್ಲಾ ಭಾಗವಹಿಸಿದರು. ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಅರ್ಶದ್ ಹುಸೈನ್ ಪ್ರಸ್ತಾವಿಸಿದರು.

ಸಮಾಜ ಸೇವಕರಾದ ಜಯಪ್ರಕಾಶ್ ಎಸ್. ಮತ್ತು ಗಣೇಶ್ ಮೆಂಡನ್ ಇವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಾದ ಗಂಗಾಧರ, ಲೋಕೇಶ್ ಎಸ್, ಹಾಗೂ ಇಮ್ರಾನ್ ಖಾನ್ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಯೋಗೀಶ್ ಶೆಟ್ಟಿಯವರು ನಿರೂಪಿಸಿದರು, ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ರಾಜೇಶ್ ಹೊಸಬೆಟ್ಟು, ಸಂಘದ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಸತೀಶ್ ಮುಂಚೂರು, ರತನ್ ಶೆಟ್ಟಿ ಮತ್ತು ಭಾಸ್ಕರ್ ರೈಯವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಶರತ್ ಕೊಟ್ಟಾರಿ ವಂದಿಸಿದರು.