ಮುಲ್ಕಿ: ಒಂಭತ್ತು ಮಾಗಣೆ ಮುಂಡಾಳ ಶಿವ ಸಮಾಜ ಸೇವಾ ಸಂಘ (ರಿ) ಗೇರುಕಟ್ಟೆ ಮುಲ್ಕಿ ವತಿಯಿಂದ ಡಿ. 29ರಂದು ಬೆಳಗ್ಗೆ 10ಗಂಟೆಗೆ ಸಂಘದ ಸಭಾಭವನದಲ್ಲಿ ವಧು-ವರರ ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ.
ವಧು-ವರರ ಅನ್ವೇಷಣಾ ಕಾರ್ಯಕ್ರಮಕ್ಕೆ ಉಚಿತ ನೋಂದಾವಣೆಯಾಗಿದ್ದು, ನೋಂದಾಹಿಸುವ ವಧು-ವರರು ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಪ್ರಮಾಣ ಪತ್ರಗಳ ಪ್ರತಿಯನ್ನು ಮತ್ತು ಫುಲ್ ಸೈಜಿನ ಫೊಟೊ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.