Sunday, July 21, 2024
HomeUncategorizedಜಯಂಟ್ಸ್ ಬ್ರಹ್ಮಾವರ ವಾಷಿ೯ಕ ಮಹಾಸಭೆ ಸಾಧಕರಿಗೆ ಅಭಿನಂದನಾ ಸಮಾರಂಭ

ಜಯಂಟ್ಸ್ ಬ್ರಹ್ಮಾವರ ವಾಷಿ೯ಕ ಮಹಾಸಭೆ ಸಾಧಕರಿಗೆ ಅಭಿನಂದನಾ ಸಮಾರಂಭ

ಬ್ರಹ್ಮಾವರ: – ಸಮಾಜದಲ್ಲಿ ನಾವೆಲ್ಲರೂ ಹೊಸ ಚಿಂತನೆಗಳನ್ನು ಬೆಳೆಸಿಕೊಂಡು ಪರಿಸರಕ್ಕೆ ಪೂರಕವಾದ ಕಾಯ೯ ಮಾಡಬೇಕಾಗಿದೆ ಎಂದು ಡಾ| ಎ.ವಿ ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞರಾದ ಡಾII ವಿರೂಪಾಕ್ಷ ದೇವರಮನೆ ಹೇಳಿದರು.
ಅವರು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ವತಿಯಿಂದ ಸಿಟಿ ಸೆಂಟರ್ ನಲ್ಲಿ ನಡೆದ ವಾಷಿ೯ಕ ಮಹಾಸಭೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸೇವಾ ಕಾಯ೯ಗಳನ್ನು ಮಾಡಿದಾಗ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು.
ಜಯಂಟ್ಸ್ ಫೆಡರೇಶನ್ 6 ರ ಅಧ್ಯಕ್ಷ ಎಲ್.ಬಿ ದೊಡ್ಡಮನಿ ಜಯಂಟ್ಸ್ ನ ಮುಂದಿನ ಕಾಯ೯ಕ್ರಮಗಳ ವಿವರ ನೀಡಿದರು.
ವೇದಿಕೆಯಲ್ಲಿ ಫೆಡರೇಶನ್ ಪೂವ೯ ಅಧ್ಯಕ್ಷ ಮಧುಸೂಧನ್ ಹೇರೂರು, ಉಪಾಧ್ಯಕ್ಷ ತೇಜೇಶ್ವರ ರಾವ್, ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್, ಮುಂತಾದವರು ಉಪಸ್ಥಿತರಿದ್ದರು. ಅದ್ಯಕ್ಷತೆಯನ್ನು ಜಯಂಟ್ಸ್ ಅದ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು.
ಈ ಸಂದಭ೯ದಲ್ಲಿ ಖ್ಯಾತ ಮಿಯಾವಾಕಿ ತಜ್ಞ ಕೆ.ಮಹೇಶ್ ಶೆಣಿೈ, ಈಜು ಪಟು ಲಿಮ್ಕಾ ದಾಖಲೆಗಾರ ರೋನಾನ್ ಲೂವಿಸ್ ರವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಿಧನರಾದ ಜಯಂಟ್ಸ್ ಉಡುಪಿ ಮಾಜಿ ಅಧ್ಯಕ್ಷ ಜಯರಾಂ ರಾವ್, ಡಾII ಎ.ರಾಜಾ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಡಾII ಜೀವನ್ ಕೃಷ್ಣ ಯುಎಸ್ಐ ರವರ ಪ್ರಾಯೋಜಕತ್ವದಲ್ಲಿ ಅನಾಥ ಶ್ರಮಗಳಿಗೆ ವಿಲ್ ಚೈರ್ ಗಳನ್ನು ಹಸ್ತಾಂತರಿಸಲಾಯಿತು.ಕಾಯ೯ ದಶಿ೯ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು.ಶ್ರೀನಾಥ ಕೋಟ, ರೊನಾಲ್ಡ್ ಸಹಕರಿಸಿದರು.ಕಾಯ೯ ಕ್ರಮದಲ್ಲಿ ಎಜಿ ಸುವಣ೯ ಮುಂಬಯಿ, ಡಾII ಅಜಿತ್ ಕುಮಾರ್ ಡಾ” ವಿಶ್ವನಾಥ್ , ಜಯಂಟ್ಸ್ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular