Sunday, July 21, 2024
Homeಮಂಗಳೂರುಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ವಿಶ್ವ ಯೋಗ ದಿನಾಚರಣೆ

ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ವಿಶ್ವ ಯೋಗ ದಿನಾಚರಣೆ

ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಇಂದು ಸೆಂಟ್ ಸಿಸಿಲಿಸ್ ಹೈಸ್ಕೂಲ್ ಉಡುಪಿಯಲ್ಲಿ ಆಚರಿಸಲಾಯಿತು. ಯೋಗ ಗುರುಗಳಾದ ರಾಜೇಶ ಶೆಟ್ಟಿ ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಯೋಗದಿಂದ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ಹಾಗೂ ವಿವಿಧ ಬಗೆಯ ಯೋಗ ಪ್ರತ್ಯಕ್ಷತೆಯನ್ನು ನೀಡಿ ಸಹಕರಿಸಿದರು .ಶೂನ್ಯ ( ಯೋಗ ) ಮಾಸ್ಟರ್ ಧರ್ಮದತ್ತ  ದಯಾನಂದ ಕೆ.ಶೆಟ್ಟಿ ಸಹಕರಿಸಿದರು. ಯೋಗದಲ್ಲಿ ಭಾಗವಹಿಸಿದ  ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.          ವೇದಿಕೆಯಲ್ಲಿ  ಜಯಂಟ್ಸ್  ಗ್ರೂಪ್ ಮುಂಬಯಿ  ಕೇಂದ್ರ ಸಮಿತಿಯ ಸದಸ್ಯರಾದ  ದಿನಕರ್ ಅಮೀನ್, ಜಯಂಟ್ಸ್ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಮನ್ನ ತೇಜಶ್ವರ ರಾವ್, ದೇವದಾಸ್ ಕಾಮತ್, ರೇಖಾ ಪೈ ,ದಿವಾಕರ ಪೂಜಾರಿ,ರೋಶನ್ ಬಲ್ಲಾಳ್, ವಿನ್ಸೆಂಟ್, ವಾದಿರಾಜ್ ಸಾಲಿಯಾನ್,ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು  ಉಪಸ್ಥಿತರಿದ್ದರು. 

RELATED ARTICLES
- Advertisment -
Google search engine

Most Popular