Sunday, July 14, 2024
Homeರಾಜ್ಯಕದಿಂಜೆ ವಿದ್ಯಾ ಬೋಧಿನಿ ಸರಕಾರಿ ಅನುದಾನಿತ ಶಾಲೆಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ...

ಕದಿಂಜೆ ವಿದ್ಯಾ ಬೋಧಿನಿ ಸರಕಾರಿ ಅನುದಾನಿತ ಶಾಲೆಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆ

ಬಪ್ಪನಾಡು ಮುಲ್ಕಿ,ಕದಿಂಜೆ ವಿದ್ಯಾ ಬೋಧಿನಿ ಸರಕಾರಿ ಅನುದಾನಿತ ಶಾಲೆಗೆ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆಯನ್ನು ನೀಡಲಾಯಿತು. ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಪ್ರಾಂತ್ಯ ಅಧ್ಯಕ್ಷರಾದ ಹೆರಾಲ್ಡ್ ತೌರೋರವರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಕಳೆದ ವರ್ಷ ಆರಂಭಗೊಂಡು ಲಯನ್ಸ್ ಕ್ಲಬ್ ಬಪ್ಪನಾಡು ಅನೇಕ ಸೇವ ಕಾರ್ಯಕ್ರಮಗಳ ಮೂಲಕ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನವಾಗಿ ಮೂಡಿಬಂದಿದ್ದು ಈ ಬಾರಿಯೂ ಪ್ರಸ್ತುತ ಪ್ರಥಮ ಸ್ಥಾನದಲ್ಲಿ ಇರುವುದು ನಿಜಕ್ಕೂ ಅಭಿನಂದನೀಯ. ಇವರ ಈ ಸೇವ ಕಾರ್ಯಕ್ರಮಗಳು ಹೀಗೆ ಮುಂದುವರೆಯಲ್ಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಅಧ್ಯಕ್ಷರಾದ ಸುಧೀರ್ ಬಾಳಿಗ ಪ್ರಾಂತ್ಯ ಅಧ್ಯಕ್ಷರಾದ ಹೆರಾಲ್ಡ್ ತೌರೋ, ವಲಯ ಅಧ್ಯಕ್ಷರಾದ ಪ್ರತಿಭಾ ಹೆಬ್ಬಾರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್, ಜಗನ್ಮೋಹನ್ ದಾಸ್ , ವೈಶಾಕ್ ಹೆಬ್ಬಾರ್, ಶಾಲಾ ಪ್ರಾಂಶುಪಾಲರಾದ ಪೃಥ್ವಿರಾಜ್ ಬಳ್ಳಾಲ್, ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ತುಕರಾಮ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಅನಿಲ್ ಕುಮಾರ್, ಶಾಲಾ ಮುಖ್ಯ ಸಂಚಾಲಕರಾದ ಶೇಷಗಿರಿ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular