Sunday, July 21, 2024
Homeರಾಜ್ಯಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿ: ಪಿಕಪ್ ಡ್ರಾಪ್‌ ನೆಪದಲ್ಲಿ ಸಲುಗೆ

ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿ: ಪಿಕಪ್ ಡ್ರಾಪ್‌ ನೆಪದಲ್ಲಿ ಸಲುಗೆ

ಮರ್ಯಾದೆಗೆ ಅಂಜಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಲೋಕೇಶ್‌ ಪಿಕ್‌ ಅಪ್‌ ಡ್ರಾಪ್‌ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಹೆಣ್ಣು ಬಾಕನ ಬಲೆಗೆ ಪಿಯುಸಿ ಓದುತ್ತಿದ್ದ ರಿಷಿತಾ ಬಿದ್ದಿದ್ದಳು.

ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿಯ ಕುಟುಂಬವು ಮಾನ ಮರ್ಯಾದೆಗೆ ಹೆದರಿ ನಾಶವಾಗಿದೆ. ರಿಷಿತಾ ಕೆಆರ್‌ ನಗರದ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೋಗಿ ಬರುವಾಗ ಲೋಕೇಶ್‌ ಪರಿಚಯವಾಗಿದ್ದ. ರಿಷಿತಾಳಿಗೆ ನಿನ್ನ ತಾತ ನನಗೆ ಗೊತ್ತಿರುವವರು ಎಂದು ಪರಿಚಯ ಮಾಡಿಕೊಂಡು ಊರಿಗೆ ಡ್ರಾಪ್ ಮಾಡುತ್ತಲೇ ಸಲುಗೆ ಬೆಳೆಸಿಕೊಂಡಿದ್ದ.

ಈ ವೇಳೆ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಕರೆದಾಗ ಬರುವಂತೆ ಟಾರ್ಚರ್‌ ಕೊಟ್ಟಿದ್ದ ಎನ್ನಲಾಗಿದೆ. ಒಂದು ದಿನ ಕಾರಿನಲ್ಲಿ ಬಂದು ಅಡ್ಡಗಟ್ಟಿ ಬಾಲಕಿಗೆ ಬೆದರಿಕೆ ಹಾಕಿದ್ದ. ಈ ವೇಳೆ ಆರೋಪಿಯಿಂದ ಮೊಬೈಲ್ ಕಸಿದುಕೊಂಡು ಕಲ್ಲಿನಿಂದ ಜಜ್ಜಿ ಹಾಕಿದ್ದಳು.

ಬಳಿಕ ನಿನ್ನ ಮೊಮ್ಮಗಳು ನನ್ನ ಮೊಬೈಲ್ ಒಡೆದು ಹಾಕಿದ್ದಾಳೆ ಎಂದು ಮನೆ ಬಾಗಿಲಿಗೆ ಬಂದು ಆರೋಪಿ ಲೋಕೇಶ್‌ ಗಲಾಟೆ ಮಾಡಿದ್ದ. ಬಳಿಕ ಎಲ್ಲವನ್ನೂ ವಿಚಾರಿಸಿದಾಗ ಮನನೊಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದರು. ಆದರೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಕ್ಕೆ ನ್ಯಾಯ ಸಿಗಲ್ಲ ಎಂದು ಭಾವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಾಲ್ವರಲ್ಲಿ ಅಪ್ರಾಪ್ತೆಯ ತಾತ ಮತ್ತು ತಾಯಿ ಮೃತಪಟ್ಟರೆ, ಬಾಲಕಿ ಹಾಗೂ ಅಜ್ಜಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಗ್ರಾಮದಲ್ಲೇ ಮೃತದೇಹ ಇಟ್ಟುಕೊಂಡಿದ್ದಾರೆ. ದೂರು ಕೊಟ್ಟರೂ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಬೇಕು ಹಾಗೂ ಮೃತ ಕುಟುಂಬಸ್ಥರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು.

ಈ ವಿಷಯ ತಿಳಿಯುತ್ತಿದ್ದ ಆಕ್ರೋಶಗೊಂಡ ಚಂದಗಾಲು ಗ್ರಾಮಸ್ಥರು ಮಹದೇವನಾಯಕರ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಕೆ.ಆರ್.ನಗರ ಮುಖ್ಯರಸ್ತೆಯಲ್ಲಿ ಶವ ಇಟ್ಟು ಪ್ರತಿಭಟಿಸಿ, ಆರೋಪಿಗೆ ಉಗ್ರ ಶಿಕ್ಷೆ ಕೊಡಬೇಕೆಂದು ಆಗ್ರಹಿಸಿದರು.

ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ನಿವಾಸಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿದರು. ಮೃತ ಕುಟುಂಬದ ಸದಸ್ಯರ ಜತೆ ಮಾತುಕತೆ ನಡೆಸಿದರು. ಮೃತ ಮಹದೇವನಾಯ್ಕ ಪುತ್ರ ಮಂಜುಗೆ ಸಾಂತ್ವನ ಹೇಳಿದರು.

RELATED ARTICLES
- Advertisment -
Google search engine

Most Popular