ನವದೆಹಲಿ: ಬರ್ತ್ ಡೇ ಕೇಕ್ ತಿಂದು ಪಂಜಾಬ್ ನ ಹತ್ತು ವರ್ಷದ ಬಾಲಕಿ ಮಾನ್ವಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಘಾತಕಾರಿ ಸತ್ಯ ಹೊರಬಿದ್ದಿದೆ. ತನಿಖೆಯಲ್ಲಿ ಮಾನ್ವಿಯ ಮಾನ್ವಿಯ ಸಾವಿಗೆ ನಿಜವಾದ ಕಾರಣ ಏನೆಂಬುದು ಬಹಿರಂಗವಾಗಿದೆ. ಕೇಕ್ ನಲ್ಲಿ ಕೃತಕ ಸಿಹಿಕಾರಕ ಸ್ಯಾಕರಿನ್ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದು ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಕೇಕ್ ತಿಂದವರೆಲ್ಲಾ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾನ್ವಿ ಸಾವನ್ನಪ್ಪಿದ್ದಳು. ಸಂಭ್ರಮದಿಂದ ಬರ್ತ್ ಡೇ ಆಚರಿಸಿದ್ದ ಕುಟುಂಬದ ಮನೆಯಲ್ಲಿ ಬರ್ತ್ ಡೇ ಹುಡುಗಿಯೇ ಸಾವನ್ನಪ್ಪಿ ಕಣ್ಣೀರು ಹರಿದಿತ್ತು. ಕೇಕ್ ತಯಾರಿಸಿದ್ದ ಬೇಕರಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.