Saturday, July 20, 2024
Homeರಾಜಕೀಯರೀಲ್ಸ್‌ಗಾಗಿ ಇದೆಂತಹಾ ಹುಚ್ಚಾಟ? | ಯುವಕನ ಕೈ ಹಿಡಿದು ಕಟ್ಟಡದ ಮೇಲಿಂದ ನೇತಾಡುವ ಭಯಾನಕ ದೃಶ್ಯ...

ರೀಲ್ಸ್‌ಗಾಗಿ ಇದೆಂತಹಾ ಹುಚ್ಚಾಟ? | ಯುವಕನ ಕೈ ಹಿಡಿದು ಕಟ್ಟಡದ ಮೇಲಿಂದ ನೇತಾಡುವ ಭಯಾನಕ ದೃಶ್ಯ ನೀವೂ ನೋಡಿ!

ಪುಣೆ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ ಮಾಡುವುದು, ಅವುಗಳಿಗೆ ಹೆಚ್ಚು ಲೈಕ್‌, ಶೇರ್‌ ಪಡೆಯುವುದು ಇಂದಿನ ಯುವ ಸಮಾಜದ ಹವ್ಯಾಸವಾಗಿದೆ. ಆದರೆ ರೀಲ್ಸ್‌ ತಮ್ಮ ಜೀವಕ್ಕೆ ಅಪಾಯವನ್ನೇ ತಂದೊಡ್ಡುವಂತಿರಬಾರದು ಎಂಬ ಎಚ್ಚರಿಕೆ ಇರಬೇಕು. ಈ ರೀಲ್ಸ್‌ ಹುಚ್ಚಿನಿಂದ ಕೆಲವರು ಪ್ರಾಣ ಕಳೆದುಕೊಂಡದ್ದೂ ಇದೆ. ಅಂತಹುದರಲ್ಲಿ ಇಲ್ಲೊಬ್ಬಳು ಮಾಡಿರುವ ರೀಲ್ಸ್‌ ಎಂತಹವರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.
ರೀಲ್ಸ್‌ಗಾಗಿ ಯುವಕನ ಕೈ ಹಿಡಿದು ಹಳೆಯ ಕಟ್ಟಡದ ಮೇಲಿಂದ ನೇತಾಡುವ ಅಪಾಯಕಾರಿ ಸಾಹಸ ಈಕೆ ಮಾಡಿದ್ದಾಳೆ. ಒಂದು ವೇಳೆ ಯುವಕನ ಕೈ ಸಡಿಲಗೊಂಡು, ಅಥವಾ ಆಕೆಗೇ ಸರಿಯಾಗಿ ಹಿಡಿದುಕೊಳ್ಳಲು ಅಸಾಧ್ಯವಾಗಿರುತ್ತಿದ್ದರೆ ಆಕೆ ಕೆಳಗೆ ಬಿದ್ದಿದ್ದರೆ ಪ್ರಾಣಾಪಾಯವಿತ್ತು. ಈ ಭಯಾನಕ ರೀಲ್ಸ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ ಬುದ್ಧಿ ಮಾತು ಹೇಳುತ್ತಿದ್ದಾರೆ.

ಅದೆಂತಹಾ ಬೆಚ್ಚಿ ಬೀಳುವ ವೀಡಿಯೊ ಎಂದು ನೀವೇ ಈ ಕೆಳಗಿನ ಎಕ್ಸ್‌ ಖಾತೆಯ ಲಿಂಕ್‌ ಕ್ಲಿಕ್‌ ಮಾಡಿ ನೋಡಿ…

https://x.com/moonfirescom/status/1803452922564579791?ref_src=twsrc%5Etfw%7Ctwcamp%5Etweetembed%7Ctwterm%5E1803452922564579791%7Ctwgr%5E10ddc1825201fc78aea3c720d24bf555278f2c63%7Ctwcon%5Es1_&ref_url=https%3A%2F%2Fwww.udayavani.com%2Fviral-news%2Fpune-girl-hangs-from-top-of-building-in-dangerous-stunt

RELATED ARTICLES
- Advertisment -
Google search engine

Most Popular