Wednesday, April 23, 2025
HomeUncategorizedಸೀಟು ಕೊಡುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ವೀಡಿಯೋ ವೈರಲ್

ಸೀಟು ಕೊಡುವ ನೆಪದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ವೀಡಿಯೋ ವೈರಲ್

ಮಂಗಳೂರು: ಬಸ್​ನಲ್ಲಿ ಸೀಟು ಕೊಡುವ ನೆಪದಲ್ಲಿ ಬಾಲಕಿಯೊಬ್ಬಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಬಸ್ ನಲ್ಲೇ ಸಾರ್ವಜನಿಕರು ಥಳಿಸುರವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕೆ.ಎಸ್​ಆರ್​ಟಿಸಿ ಬಸ್​ನಲ್ಲಿ ಘಟನೆ ನಡೆದಿದ್ದು, ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬನಿಗೆ ಬಸ್​ನಲ್ಲಿದ್ದ ಮಹಿಳೆಯರೇ ಧರ್ಮದೇಟು ಕೊಟ್ಟಿದ್ದಾರೆ.

ಮೂಲಗಳ ಪ್ರಕಾರ ಸೀಟು ಬಿಟ್ಟುಕೊಡುವ ನೆಪದಲ್ಲಿ ಬಾಲಕಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಈ ಆಸಾಮಿ ಬಾಲಕಿ ಮೇಲೆ ಅಸಭ್ಯವಾಗಿ ಕೈಹಾಕಿದ್ದಾನೆ.

ಆರೋಪಿಯು ತನ್ನ ಕೃತ್ಯವನ್ನು ಮುಂದುವರಿಸುತ್ತಿದ್ದಂತೆ ಬಾಲಕಿ ಜಾಗೃತಳಾಗಿ ಮನೆ ಮಂದಿಗೆ ತಿಳಿಸಿದ್ದು, ತಕ್ಷಣ ಆಕೆಯ ತಾಯಿ ಹಾಗೂ ಬಸ್​ನಲ್ಲಿದ್ದ ಇತರ ಮಹಿಳೆಯರು ಮುಖ- ಮೂತಿ ನೋಡದೇ ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಈ ವ್ಯಕ್ತಿಯು ಕುಟುಂಬವೊಂದರ ಜತೆ ಪ್ರಯಾಣ ಮಾಡುತ್ತಿದ್ದ ಬಾಲಕಿಯನ್ನು ಸೀಟು ಕೊಡುವ ನೆಪದಲ್ಲಿ ಹತ್ತಿರ ಕೂರಿಸಿಕೊಂಡಿದ್ದ. ಬಳಿಕ ತನ್ನ ದುರ್ಬುದ್ಧಿ ತೋರಿದ ಆತ ಬಾಲಕಿಯ ತೊಡೆ ಮೇಲೆ ಕೈಯಿಟ್ಟು ಅಸಭ್ಯವಾಗಿ ವರ್ತಿಸಿದ್ದ. ಬಳಿಕ ಆಕೆಯ ಮೈಯೆಲ್ಲ ಕೈಯಾಡಿಸಲು ಶುರುಮಾಡಿದ್ದ. ಕಿರುಕುಳದ ಕುರಿತು ಅರಿವು ಹೊಂದಿದ್ದ ಆಕೆ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿದ್ದಾಳೆ.

ಎಚ್ಚೆತ್ತುಕೊಂಡ ಆಕೆಯ ತಾಯಿ ಹಾಗೂ ಬಸ್​ನಲ್ಲಿದ್ದ ಇತರೆ ಮಹಿಳೆಯರು ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮೊದಲು ಆರೋಪ ಅಲ್ಲಗಳೆದ ಆರೋಪಿ ಬಳಿಕ ಇನ್ನು ಮುಂದೆ ಆ ರೀತಿ ಮಾಡಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಆತನ ತಪ್ಪೊಪ್ಪಿಗೆ ಹೇಳತ್ತಿದ್ದಂತೆ ಜಾಗೃತರಾದ ಉಳಿದ ಮಹಿಳೆಯರೆಲ್ಲರೂ ಆತನ ಟೊಪ್ಪಿ ಹಾರಿ ಹೋಗುವಂತೆ ಬಡಿದಿದ್ದಾರೆ. ಕೈಯಿಂದಲೇ ಹಲ್ಲೆ ಮಾಡಿ ಆತನ ಚಳಿ ಬಿಡಿಸಿದ್ದಾರೆ. ಬಸ್​​ನಲ್ಲಿದ್ದ ಇತರರು ಈ ದೃಶ್ಯದ ವಿಡಿಯೊ ಮಾಡಿದ್ದು, ಈ ವಿಡಿಯೊ ವೈರಲ್ ಆಗಿದೆ.

https://twitter.com/CTRavi_BJP/status/1812515198659670238?ref_src=twsrc%5Etfw%7Ctwcamp%5Etweetembed%7Ctwterm%5E1812515198659670238%7Ctwgr%5Efc1a968d7151e4512f4f1a68633cf745a0772577%7Ctwcon%5Es1_c10&ref_url=https%3A%2F%2Fapi-news.dailyhunt.in%2F

RELATED ARTICLES
- Advertisment -
Google search engine

Most Popular