Monday, July 15, 2024
Homeರಾಷ್ಟ್ರೀಯಚಲಿಸುತ್ತಿದ್ದ ಶಾಲಾ ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟ ಬಾಲಕಿಯರು | ಚಾಲಕನ ಬಂಧನ

ಚಲಿಸುತ್ತಿದ್ದ ಶಾಲಾ ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟ ಬಾಲಕಿಯರು | ಚಾಲಕನ ಬಂಧನ

ವಡೋದರ: ಚಲಿಸುತ್ತಿದ್ದ ಶಾಲಾ ವ್ಯಾನ್ ನಿಂದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಎಸೆಯಲ್ಪಟ್ಟ ಘಟನೆ ನಡೆದಿದೆ. ಗುಜರಾತ್ ನ ವಡೋದರದಲ್ಲಿಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಬುಧವಾರ ಘಟನೆ ನಡೆದಿದೆ. ಮಾರುತಿ ಇಕೋ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಹಿಂಬದಿಯ ಬಾಗಿಲು ತೆರೆಯಲ್ಪಟ್ಟಿದೆ. ಇಬ್ಬರು ಬಾಲಕಿಯರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಬಾಲಕಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ದುರ್ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಾಹನದ ಹಿಂಬದಿ ಬಾಗಿಲು ಸರಿಯಾಗಿ ಹಾಕದ ಪರಿಣಾಮವಾಗಿ ಬಾಗಿಲು ತೆರೆಯಲ್ಪಟ್ಟು ಮಕ್ಕಳು ರಸ್ತೆಗೆ ಬೀಳುವಂತಾಗಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಬೇರೆ ವಾಹನಗಳು ಸಾಗುತ್ತಿಲ್ಲವಾದುದರಿಂದ ಹೆಚ್ಚಿನ ಅಪಾಯ ತಪ್ಪಿದೆ. ರಸ್ತೆ ಪಕ್ಕದ ಮನೆಯವರು ಬಾಲಕಿಯರ ಸಹಾಯಕ್ಕೆ ಬಂದಿದ್ದಾರೆ. ಚಾಲಕನ ಅಜಾಗರೂಕತೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ…

My Vadodara on X: “વડોદરા ની ઘટના! ચાલુ સ્કૂલ વાન નો દરવાજો અચાનક ખુલતા 2 છોકરીઓ રોડ પર પટકાઈ! #vadodara #schoolvan https://t.co/pBRCA07ies” / X

RELATED ARTICLES
- Advertisment -
Google search engine

Most Popular