26.6 C
Udupi
Tuesday, November 29, 2022
spot_img

ಸಂಸ್ಕಾರ ನೀಡುವುದೇ ಶಿಕ್ಷಣ: ಪ್ರಕಾಶ್ ಮಲ್ಪೆ

ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಎರಡನೇ ದಿನದ ತೃತೀಯ ಗೋಷ್ಠಿ ‘ನವದಂಪತಿಗಳ ಸಮಾವೇಶ’ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಿತು‌.

ಗೋಷ್ಠಿಯಲ್ಲಿ ಖ್ಯಾತ ವಾಗ್ಮಿ ಪ್ರಕಾಶ್ ಮಲ್ಪೆ ನವದಂಪತಿಗಳ ಸಮಾವೇಶದಲ್ಲಿ ಉಪನ್ಯಾಸ ನೀಡಿದರು. ಭಾಷೆ ಎನ್ನುವುದು ಸಂವಹನ ಮಾಧ್ಯಮವಾಗಿರದೆ ಅದೊಂದು ಸಂಸ್ಕೃತಿಯಾಗಿದೆ. ಸಂಸ್ಕಾರವನ್ನು ಕೊಡುವುದೇ ಶಿಕ್ಷಣವಾದ್ದರಿಂದ ಸಂಸ್ಕೃತಿಯನ್ನು ಪರಿಚಯಿಸುವ ನಮ್ಮ ಭಾಷೆಯಲ್ಲೇ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಾತೃ ಭಾಷೆಯಲ್ಲಿ ಕಲಿತ ಮಕ್ಕಳು ಹೆಚ್ಚು ವಿಷಯಾಸಕ್ತಿಯನ್ನು ಹೊಂದುವುದರಿಂದ ಮಕ್ಕಳನ್ನು ಮಾತೃಭಾಷೆಯಲ್ಲಿ ಶಿಕ್ಷಣ ಸಿಗುವ ಮಾಧ್ಯಮಕ್ಕೆ ಸೇರಿಸುವ ಜವಾಬ್ದಾರಿ ಪೋಷಕರಲ್ಲಿದೆ ಎನ್ನುವುದನ್ನು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles