ಮಂಗಳೂರು: ಪ್ರಮುಖ ಭಾರತೀಯ ಟೈರ್ ಉತ್ಪಾದಕ ಸಂಸ್ಥೆಯಾದ ಸಿಯೆಟ್ ತನ್ನ ಚೆನ್ನೈ ಸ್ಥಾವರವನ್ನು ವಲ್ರ್ಡ್ ಎಕನಾಮಿಕ್ ಫೆÇೀರಮ್‍ನ (ಡಬ್ಲ್ಯುಇಎಫ್) ಗ್ಲೋಬಲ್ ಲೈಟ್‍ಹೌಸ್ ನೆಟ್‍ವರ್ಕ್‍ನ ಭಾಗವಾಗಿ ಗುರುತಿಸಲ್ಪಡುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ.
ಸಿಯೆಟ್ ಈ ಪ್ರತಿಷ್ಠಿತ ಗೌರವವನ್ನು ಪಡೆದ ವಿಶ್ವದ ಮೊದಲ ಟೈರ್ ಬ್ರ್ಯಾಂಡ್ ಆಗಿದೆ ಎಂದು ಆರ್‍ಪಿಜಿ ಗ್ರೂಪ್‍ನ ಉಪಾಧ್ಯಕ್ಷ ಅನಂತ ಗೋಯೆಂಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಗ್ಲೋಬಲ್ ಲೈಟ್‍ಹೌಸ್ ನೆಟ್‍ವರ್ಕ್, ಕೃತಕ ಬುದ್ಧಿಮತ್ತೆ (ಎಐ), ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್ (ಐಐಓಟಿ), ರೊಬೊಟಿಕ್ಸ್ ಮತ್ತು ಸುಧಾರಿತ ವಿಶ್ಲೇಷಣೆಗಳು ಸೇರಿದಂತೆ 4ಐಆರ್ ತಂತ್ರಜ್ಞಾನಗಳ ಅನುಷ್ಠಾನದ ಮೂಲಕ ಪರಿವರ್ತಕ ಫಲಿತಾಂಶಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಉತ್ಪಾದನಾ ಸೌಲಭ್ಯಗಳನ್ನು ಗುರುತಿಸಲು ಮತ್ತು ಅನುಷ್ಠಾನಗೊಳಿಸಲು ವೇದಿಕೆಯಾಗಿ ಇದು ಕಾರ್ಯನಿರ್ವಹಿಸುತ್ತದೆ.
ಇದು ಕಾರ್ಯಾಚರಣೆಯಲ್ಲಿ ದಕ್ಷತೆ, ಸುಸ್ಥಿರತೆ ಸೂಚ್ಯಂಕ ಹೆಚ್ಚಳ, ಶ್ರಮಶಕ್ತಿಯ ವರ್ಕ್‍ಫೆÇೀರ್ಸ್ ಡಿಜಿಟಲ್ ಸಕ್ರಿಯಗೊಳಿಸುವಿಕೆಗೆ ನೆರವಾಗಲಿದೆ. ಡಬ್ಲ್ಯುಇಎಫ್ ಗ್ಲೋಬಲ್ ಲೈಟ್‍ಹೌಸ್ ನೆಟ್‍ವರ್ಕ್‍ನ ವಿಶಿಷ್ಟ ಸದಸ್ಯರಾಗಿ, ಉತ್ಪಾದನೆಯ ಉತ್ಕೃಷ್ಟತೆಯಲ್ಲಿ ಇತರ ಜಾಗತಿಕ ನಾಯಕರೊಂದಿಗೆ ಸಹಯೋಗ ಮತ್ತು ಜ್ಞಾನ ವಿನಿಮಯಕ್ಕಾಗಿ ಸಾಟಿಯಿಲ್ಲದ ಅವಕಾಶಗಳಿಗೆ ಸಿಯೆಟ್ ಪ್ರವೇಶವನ್ನು ಪಡೆಯುತ್ತದೆ ಎಂದು ಸಿಯೆಟ್‍ನ ಮ್ಯಾನುಫ್ಯಾಕ್ಚರಿಂಗ್‍ನ ಹಿರಿಯ ಉಪಾಧ್ಯಕ್ಷ ಜಯಶಂಕರ್ ಕುರುಪ್ಪಲ್ ಹೇಳಿದ್ದಾರೆ.